ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿ ಅ.ರಾ. ಪ್ರಭಾಕರ ಪೂಜಾರಿಯವರನ್ನು ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಆಯ್ಕೆಮಾಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರವರ ಮಾರ್ಗದರ್ಶನದಲ್ಲಿ ನೂತನ ತಂಡವನ್ನು ರಚಿಸಿ ಜಿಲ್ಲೆ ಯಾದ್ಯಂತ ಕನ್ನಡಪರ ಕೆಲಸಗಳನ್ನು ನಡೆಸುತ್ತಾ, ಕನ್ನಡ ಹಾಗು ಕರ್ನಾಟಕಕ್ಕೆ ಅನ್ಯಾಯವೆಸ ಗುವವರ ವಿರುದ್ಧ ಹೋರಾಡಲು ಸದಾ ಸಿದ್ದರಿದ್ದೇವೆ ಎಂದು ನೂತನ ಅಧ್ಯಕ್ಷ ಅ.ರಾ.ಪ್ರಭಾಕರ ಪೂಜಾರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












