ಉಡುಪಿ, ಸೆಪ್ಟೆಂಬರ್ 23: ಮೂಲತಃ ಒಡಿಸ್ಸಾ ರಾಜ್ಯದ ಮಯೂರ್ಭಂಜ್ ಜಿಲ್ಲೆ ಸುಲಿಯಾಪದ ತಾಲೂಕು ಕದಾಕೋಥಾ ಗ್ರಾಮದ ನಿವಾಸಿ ಪ್ರಸ್ತುತ ನಗರದ ನಿಟ್ಟೂರಿನ ಬಾಳಿಗ ಫಿಶ್ನೆಟ್ ಒಡಿಸ್ಸಾ ಹಾಸ್ಟೆಲ್‌ನಲ್ಲಿ ವಾಸವಿದ್ದ ಬನಮಾಲಿ ನಾಯ್ಕ್ (29) ಎಂಬ ವ್ಯಕ್ತಿಯು ಸೆಪ್ಟಂಬರ್ 12 ರಿಂದ ನಾಪತ್ತೆಯಾಗಿರುತ್ತಾರೆ.
170 ಸೆಂ.ಮೀ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದ ಇವರು, ಹಿಂದಿ ಹಾಗೂ ಓಡಿಯಾ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.