ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಂದು ಎಳ್ಳಮವಾಸ್ಯೆಯನ್ನು ಸಂಪ್ರದಾಯಬದ್ದವಾಗಿ ಆಚರಿಸಲಾಯ್ತು. ಎಳ್ಳಮವಾಸ್ಯೆಯಂದು ಪಿತೃಗಳಿಗೆ ಪಿಂಡ ಬಿಡುವುದು ಸಂಪ್ರದಾಯ. ಜೊತೆಗೆ ಎಳ್ಳಮವಾಸ್ಯೆಯಂದು ಸಮುದ್ರ ಸ್ನಾನ ಮಾಡಿದ್ರೆ ಸಕಲ ಚರ್ಮರೋಗ ನಿವಾರಣೆಯಾಗುತ್ತೆ ಎಂಬ ನಂಬಿಕೆ ಜನರಲ್ಲಿದೆ.
ಈ ದಿನದಂದು ಸಮುದ್ರ ಸ್ನಾನ ಮಾಡುವುದು ಸಂಪ್ರದಾಯ. ಬೆಳಗ್ಗೆಯಿಂದಲೇ ಸಾವಿರಾರು ಮಂದಿ ಮಲ್ಪೆಯಲ್ಲಿ ಸಮುದ್ರ ಸ್ನಾನ ಮಾಡಿದರು. ಪಿತೃಗಳಿಗೆ ಎಳ್ಳಮವಾಸ್ಯೆಯಂದು ಪಿಂಡಪ್ರದಾನ ಮಾಡಿದ್ರೆ ಅವರ ಆತ್ಮ ಸದ್ಗತಿಯನ್ನು ಪಡೆಯುತ್ತದೆ- ಆತ್ಮಕ್ಕೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಉಡುಪಿ ನಗರ ಮಾತ್ರವಲ್ಲದೆ , ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಜನರು ಬಂದಿದ್ದರು. ಜನರ ಅನುಕೂಲಕ್ಕಾಗಿ ನೂರಾರು ವೈದಿಕರು ಹಾಜರಿದ್ದು ಪಿಂಡಪ್ರದಾನದ ಸಂಪ್ರದಾಯಗಳನ್ನು ನಡೆಸಿಕೊಟ್ಟರು. ಪಿಂಡಪ್ರದಾನ ಮಾಡಿದ ಬಳಿಕ ಸಮುದ್ರದಲ್ಲಿ ಅರ್ಗ್ಯ ಬಿಟ್ಟು ಸ್ನಾನ ಮಾಡಿ, ಅಲ್ಲೇ ಪಕ್ಕದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.