ಉಡುಪಿ: ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾದ ನಿಮ್ಮ ಉಡುಪಿ ಎಕ್ಸ್ ಪ್ರೆಸ್ ಪ್ರತಿ ಬಾರಿಯಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಜೊತೆ ತಾಯಂದಿರ ಫೋಟೋ ಸ್ಪರ್ಧೆ “ಅಮ್ಮ ವಿದ್ ಕಂದಮ್ಮ-ಸೀಸನ್ 5” ಅನ್ನು ಏರ್ಪಡಿಸಿದ್ದು, ಸತತ ಐದನೇ ವರ್ಷವೂ ಅಮ್ಮಂದಿರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಡುಪಿ ಎಕ್ಸ್ ಪ್ರೆಸ್ ಅಮ್ಮ ವಿತ್ ಕಂದಮ್ಮ ಸೀಸನ್-5 ನ ಬಹುಮಾನ ವಿಜೇತ ಅಮ್ಮ-ಮಕ್ಕಳಿವರು
ಪ್ರಥಮ ಬಹುಮಾನ ವಿಜೇತರು
ಮಗುವಿನ ಹೆಸರು: ನವರನ್ ಶೆಣೈ ಎಂ
ತಾಯಿಯ ಹೆಸರು : ಸನಿಹ ಪೈ ಕೆ.ಎಸ್
ಸ್ಥಳ : ಮೂಡಬಿದ್ರೆ
ಛಾಯಾಗ್ರಹಣದಲ್ಲಿ ಹಿಡಿದಿಟ್ಟ ಭಾವನೆ ಅದ್ಭುತವಾಗಿ ಮೂಡಿಬಂದಿದೆ. ಬೆಳಗ್ಗಿನ ಜಾವ ತಾಯಿ ಮಗುವಿಗೆ ಎಣ್ಣೆ ಸ್ನಾನ ಮಾಡಿಸುವ ಆ ಬಂಧದ ಸೊಗಸು ಮತ್ತು ತಾಯಿ ಮಗುವಿನ ಸಂಬಂಧದ ನಿಷ್ಕಲ್ಮಶ ಪ್ರೀತಿ ಮತ್ತು ಕಾಳಜಿ ಈ ಚಿತ್ರದಲ್ಲಿ ಹೊರ ಹೊಮ್ಮಿದೆ.
—
ದ್ವಿತೀಯ ಬಹುಮಾನ ವಿಜೇತರು
ಮಗುವಿನ ಹೆಸರು: ದಕ್ಷ್ ಪಿ ಕೆ
ತಾಯಿಯ ಹೆಸರು : ಪ್ರಿಯಾಶ್ರೀ
ಸ್ಥಳ : ಬೆಳ್ತಂಗಡಿ
ಉತ್ತಮವಾದ ಸೃಜನಶೀಲತೆ. ಹಳೆಯ ಕಾಲದ ಅಡುಗೆಯ ರೀತಿಯಲ್ಲಿ. ಈಗಿನ ಕಾಲದಲ್ಲಿ ಮರೆಮಾಚಿರುವ ಈ ರೀತಿಯ ಅಡುಗೆ ಶೈಲಿಯನ್ನ ಎತ್ತಿ ಹಿಡಿದಿರುವುದು ನಿಜಕ್ಕೂ ಇಷ್ಟ ಆಗಿದೆ. ಆ ಕ್ಷಣದ ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ. ತಾಯಿ ಮಗುವಿನ ಪ್ರೀತಿಯ ಬೆಸುಗೆಯನ್ನ ವ್ಯಕ್ತಪಡಿಸಿದೆ.
—
ತೃತೀಯ ಬಹುಮಾನ ವಿಜೇತರು
ಮಗುವಿನ ಹೆಸರು: ಸಾಹಿತ್ಯ
ತಾಯಿಯ ಹೆಸರು: ಕೌಸಲ್ಯ ಕೃಷ್ಣಮೂರ್ತಿ
ಸ್ಥಳ: ಬ್ರಹ್ಮಾವರ
ನೈಜತೆಯ ಜೊತೆ ಸೃಜನಶೀಲತೆಯನ್ನು ತೋರಿರುವ ಚಿತ್ರ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಅನ್ನುವ ಮಾತಿಗೆ ತಕ್ಕಂತಿದೆ. ತಾಯಿ ಮತ್ತು ಮಗಳ ನಡುವಿನ ಪ್ರೀತಿ ಮತ್ತು ನಂಟನ್ನು ,ಕಾಳಜಿಯನ್ನು ಎತ್ತಿ ಹಿಡಿಯುವ ಚಿತ್ರ
—
ಈ ಬಾರಿ ವಿಶೇಷವಾಗಿ ಪ್ರತಿಭಾನ್ವಿತ ಚಿತ್ರನಟಿ ಸ್ವಾತಿ ಶೆಟ್ಟಿ ಹಾಗೂ ಫೋಟೋಗ್ರಾಫರ್ , ರಂಗಭೂಮಿ ಕಲಾವಿದ ಕಾರ್ತಿಕ್ ಪ್ರಭು ಅವರು ತೀರ್ಪುಗಾರರಾಗಿ ಅತ್ಯುತ್ತಮ ಫೋಟೋಗಳನ್ನು ಆಯ್ಕೆ ಮಾಡಿ ವಿಜೇತರನ್ನು ಘೋಷಿಸಿದ್ದಾರೆ. ತೀರ್ಪುಗಾರರು ವಿವಿಧ ಆಯಾಮಗಳಲ್ಲಿ ಫೋಟೋಗಳ ಪರಾಮರ್ಶೆ ನಡೆಸಿ ನಿಷ್ಪಕ್ಷಪಾತವಾಗಿ ತೀರ್ಪು ನೀಡಿರುತ್ತಾರೆ.
ಅಮ್ಮ ವಿತ್ ಕಂದಮ್ಮ ಸೀಸನ್ -5 ರ ತೀರ್ಪುಗಾರರಾಗಿ ಸ್ಪರ್ಧಿಗಳ ಆಯ್ಕೆಯಲ್ಲಿ ಸಹಕರಿಸಿದ ಪ್ರತಿಭಾನ್ವಿತ ಚಿತ್ರನಟಿ ಸ್ವಾತಿ ಶೆಟ್ಟಿ ಅವರಿಗೆ ವಂದನೆಗಳು.
—
ಅಮ್ಮ ವಿತ್ ಕಂದಮ್ಮ ಸೀಸನ್ -5 ರ ತೀರ್ಪುಗಾರರಾಗಿ ಸ್ಪರ್ಧಿಗಳ ಆಯ್ಕೆಯಲ್ಲಿ ಸಹಕರಿಸಿದ ಫೋಟೋಗ್ರಾಫರ್ ಮತ್ತು ರಂಗಭೂಮಿ ಕಲಾವಿದ ಕಾರ್ತಿಕ್ ಪ್ರಭು ಅವರಿಗೆ ವಂದನೆಗಳು.