ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು 1949ರಲ್ಲಿ ಆರಂಭವಾಗಿ ಪ್ರಸ್ತುತ ವರ್ಷದಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಶನಿವಾರ ಕಾಲೇಜಿನ ಕ್ಯಾಂಪಸ್ ಅಕ್ಷರಶಃ ಹಳೆ ವಿದ್ಯಾರ್ಥಿಗಳ ನೆನಪು, ಭಾವನೆಗಳ ಸಮಾಗಮಕ್ಕೆ ವೇದಿಕೆಯಾಗಿತ್ತು. ಬೆಳಗ್ಗೆ ಮಾಧವ ರಕ್ಷಾ ಆಡಳಿತ ಸೌಧ ಆವರಣದಲ್ಲಿರುವ ಡಾ| ಟಿಎಂಎ ಪೈ ಅವರ ಪುತ್ಥಳಿಗೆ ಗೌರವಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಗೀತಾಂಜಲಿ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಕಾಲೇಜಿನ ಬದುಕನ್ನು ನೆನಪಿಸುವ ಫೋಟೋ ಗ್ಯಾಲರಿ ಪ್ರದರ್ಶನ ಉದ್ಘಾಟನೆ ನಡೆಯಿತು.
ಮುದ್ದಣ ಮಂಟಪ ಸಭಾಂಗಣದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಿಂದ ಹಾಗೂ ಕಾಲೇಜಿನ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳು ಸೇರಿಕೊಂಡು ಅಮೃತ ಸಂಗಮ ಉದ್ಘಾಟಿಸಿದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಪ್ರಧಾನ ಸಂಘಟಕ ಪ್ರೊ| ಎಂ.ಎಲ್. ಸಾಮಗ, ಕಾರ್ಯದರ್ಶಿ ಡಾ| ಎಂ. ವಿಶ್ವನಾಥ ಪೈ, ಖಜಾಂಚಿ ದೀಪಾಲಿ ಕಾಮತ್, ಎಂಜಿಎಂ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ, ಪಿಯು ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ, ನಿವೃತ್ತ ಪ್ರಾಂಶುಪಾಲರಾದ ಶ್ರೀಶಾ ಆಚಾರ್ಯ, ಡಾ| ವಿಶ್ವನಾಥ್ ಪೈ, ಕುಸುಮಾ ಕಾಮತ್, ಡಾ| ಎಂ. ಜಿ. ವಿಜಯ್, ಡಾ| ಎಸ್. ಆರ್. ಜಯಪ್ರಕಾಶ್ ಮಾವಿನಕುಳಿ, ಡಾ| ಸಂಧ್ಯಾ ನಂಬಿಯಾರ್ ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪೂರ್ಣಾ ಕಾಮತ್, ವಿಶ್ವನಾಥ್ ಶ್ಯಾನುಭಾಗ್ ನಿರೂಪಿಸಿದರು.