ಉಡುಪಿ:ಉಡುಪಿ ಜಿಲ್ಲೆಯ ಎಂ.ಸಿ.ಸಿ ಬ್ಯಾಂಕಿನ ಕರಾವಳಿ ಭಾಗದ ಶಾಖೆಗಳಾದ ಕುಂದಾಪುರ ಬ್ರಹ್ಮಾವರ ಮತ್ತು ಉಡುಪಿ ಇವರ ಆಶ್ರಯದಲ್ಲಿ ಎಂ.ಸಿ.ಸಿ ಬ್ಯಾಂಕ್ ಬ್ರಹ್ಮಾವರ ಶಾಖೆಯ ಆವರಣದಲ್ಲಿ ದೀಪಾವಳಿಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ಎಂ.ಸಿ.ಸಿ ಬ್ಯಾಂಕಿನ ಸಿಬ್ಬಂದಿಯವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮದ ಮೇಲೆ ಶ್ರೀ ದೇವರ ಆಶ್ರಿವಾದಗಳನ್ನು ಬೇಡಿದರು.ಶ್ರೀಯುತ ಎಲ್ರೊಯ್ ಕಿರಣ್ ಕ್ರಾಸ್ತಾ ನಿರ್ದೇಶಕರು ಎಂ.ಸಿ.ಸಿ ಬ್ಯಾಂಕ್ ಕಾರ್ಯಕ್ರಮಕೆ ಆಗಮಿಸಿದ ಅತಿಥಿಗಳನ್ನು ಹಾಗೂ ಎಲ್ಲರನ್ನೂ ಸ್ವಾಗತಿಸಿದರು, ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ರವರು, ಹಾಗೂ ವೇದಿಕೆಯ ಮೇಲ್ಭಾಗದಲ್ಲಿರುವ ಗಣ್ಯರು ದೀಪಾವಳಿಯ ದೀಪಗಳನ್ನು ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿಯಿಂದ ಚಾಲನೆಯನ್ನು ನೀಡಿದರು.
ಈ ದೀಪಾವಳಿಯ ಕಾರ್ಯಕ್ರಮದಲ್ಲಿ ಈಶ್ವರ್ ಮಲ್ಪೆ ಹೆಸರಾಂತ ಸಮಾಜಸೇವಕರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅವರು ಎಂ.ಸಿ.ಸಿ ಬ್ಯಾಂಕ್ ತನ್ನನ್ನು ಗುರುತಿಸಿ ಸನ್ಮಾನಿಸಿದಕ್ಕೆ ಬ್ಯಾಂಕಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಶುಭಕೋರಿದರು.
ಕಾರ್ಯಕ್ರಮದ ಇನ್ನೋರ್ವ ಅಥಿತಿಗಳು ಶ್ರೀ ಪಿ.ಎ ಹೆಗ್ಡೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರ್ಯಕ್ರಮಕ್ಕೆ ಶುಭಕೋರಿದರು.ಕಾರ್ಯಕ್ರಮದ ಇನ್ನೋರ್ವ ಅತಿಥಿಗಳು ಬಿ.ಎನ್ ಶಂಕರ್ ಪೂಜಾರಿಯವರು ಎಂ.ಸಿ.ಸಿ ಬ್ಯಾಂಕ್ ದೀಪಾವಳಿ ಹಬ್ಬವನ್ನು ಆಚರಿಸುವುದು ವಿಶೇಷವಾಗಿದೆ.
ಕೇವಲ ದೀಪಾವಳಿ ಮಾತ್ರವಲ್ಲ ಈದ್ ಹಬ್ಬ ಟೀಚರ್ಸ್ ಡೇ ಹಾಗೆ ಹಲವು ಹಬ್ಬಗಳನ್ನು ಎಂ.ಸಿ.ಸಿ ಬ್ಯಾಂಕ್ ಸಂಭ್ರಮಿಸಿದಕ್ಕೆ ಅವರು ಬ್ಯಾಂಕಿಗೆ ಶ್ಲಾಘಿಸಿದರು ಮತ್ತು ಶುಭಕೋರಿದರು.
ತಮ್ಮ ಅಧ್ಯಕ್ಷೀಯಾ ಮಾತುಗಳನ್ನು ಆಡಿದ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀಯುತ ಅನಿಲ್ ಲೋಬೊ ರವರು ಎಂ.ಸಿ.ಸಿ ಬ್ಯಾಂಕಿನ ಇತಿಹಾಸದಲ್ಲಿ ಪ್ರಪ್ರಥಮವಾಗಿ ನಾವೂ ಬ್ರಹ್ಮಾವರ್ ಆವರಣದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದ್ದೇವೆ, ಬ್ರಹ್ಮಾವರದ ಜನತೆ ನಮ್ಮ ಎಂ.ಸಿ.ಸಿ ಬ್ಯಾಂಕಿಗೆ ಕೊಟ್ಟ ಸಹಕಾರವನ್ನು ಅವರು ಶ್ಲಾಘಿಸಿದರು.
ಎಂ.ಸಿ.ಸಿ ಬ್ಯಾಂಕ್ ಕೇವಲ ಬ್ಯಾಂಕಿಂಗ್ ವ್ಯವಹಾರ ಮಾತ್ರವಲ್ಲ ಸಮಾಜದಲ್ಲಿ ಕಡು ಬಡವರಿದ್ದವರನ್ನು ಹುಡುಕಿ ಅವರಿಗೆ ಸಹಾಯ ಹಸ್ತ ನೀಡುತ್ತಿದೆ ಎಂದರು ಹಾಗೂ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಶ್ರೀ ಶ್ರೀಧರ್ ಬ್ರಹ್ಮಾವರ, ಉದ್ಯಮಿ ಕಾರ್ಯಕ್ರಮಕ್ಕೆ ಶುಭಕೋರಿದರು, ಕುಂದಾಪುರ ಶಾಖೆಯ ಪ್ರಬಂದಕರಾದ ಶ್ರೀಮತಿ ಜ್ಯೋತಿ ಬರೆಟ್ಟೋ, ಬ್ರಹ್ಮಾವರ ಶಾಖೆಯ ಪ್ರಬಂದಕರಾದ ಶ್ರೀ ಓವಿನ್ ರೆಬೆಲ್ಲೋ ಉಡುಪಿ ಶಾಖೆಯ ಪ್ರಬಂದಕರಾದ ಶ್ರಿ ಪ್ರದೀಪ್ ಡಿಸೋಜಾ ಇವರು ವೇದಿಕೆಯನ್ನು ಅಲಂಕರಿಸಿದರು.
ಬ್ರಹ್ಮಾವರ ಶಾಖೆಯ ಪ್ರಬಂದಕರಾದ ಶ್ರೀ ಓವಿನ್ ರೆಬೆಲ್ಲೋ ಕಾರ್ಯಕ್ರಮವನ್ನು ನಿರೂಪಿಸಿದರು, ಕುಂದಾಪುರ ಶಾಖೆಯ ಪ್ರಬಂದಕರಾದ ಜ್ಯೋತಿ ಬರೆಟ್ಟೋ ರವರು ಧನ್ಯವಾದ ಅರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ಎಸ್ ಪಿ ಮ್ಯೂಸಿಕಲ್ (ರಿ) ಕುಂದಾಪುರ ಹಾಗೂ ಯುನಿಕ್ ಡ್ಯಾನ್ಸ್ ಆಕಾಡೆಮಿ ಅಂಪಾರು 2 ಗಂಟೆಗಳ ಕಾಲ ಮನೋರಂಜನೆ ಕಾರ್ಯಕ್ರಮ ನೀಡಿದರು.ಕಾರ್ಯಕ್ರಮಕ್ಕೆ ಬಂದಿರುವ ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚಲಾಯಿತು.