ಉಡುಪಿ: ಆನ್ ಲೈನ್ ಟ್ರೇಡಿಂಗ್‌ ವಂಚನೆ ಪ್ರಕರಣ; ಇನ್ನೊಬ್ಬ ಆರೋಪಿಯ ಬಂಧನ, 80,000 ರೂ. ನಗದು ವಶ.

ಉಡುಪಿ: ಉಪೇಂದ್ರ ಅಂಬಲಪಾಡಿ ಉಡುಪಿರವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವಾಟ್ಸಾಪ್ ನಲ್ಲಿ ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್ ಲಿಮಿಟೆಡ್‌ ಮ್ಯಾನೇಜ್‌‌ಮೆಂಟ್‌ ಗ್ರೂಪ್‌ ಸೇರಿಸಿದ್ದು. ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್ ಲಿಮಿಟೆಡ್‌ ಮ್ಯಾನೇಜ್‌‌ಮೆಂಟ್‌ ಗ್ರೂಪ್‌ನ VIP-203-845 ಎಂಬ ಅಕೌಂಟ್‌ ನ್ನು ನೀಡಿರುತ್ತಾರೆ. ಪಿರ್ಯಾದಿದಾರರಿಗೆ ಮೊ.ನಂ 7842874635 ಮತ್ತು 6391854496 ನೇದರಿಂದ ವಾಟ್ಸಾಪ್ ನಲ್ಲಿ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪಿರ್ಯಾದಿದಾರರನ್ನು ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ,ಒಟ್ಟು 33,10,000/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿರುತ್ತಾರೆ. ತದನಂತರ ಪಿರ್ಯಾದಿದಾರಿಗೆ ಹೂಡಿಕೆ ಮಾಡಿದ ಹಣ ಮತ್ತು ಲಾಭಾಂಶವನ್ನು ನೀಡದೇ ಮೋಸ ಮಾಡಿರುವುದಾಗಿದೆ.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೆ 4 ಜನ ಆರೋಪಿಗಳನ್ನು ಬಂಧಿಸಿ 13,00,00/- ನಗದನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಸೆನ್ ಪೊಲೀಸ್‌ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ತನಿಖೆ ಮುಂದುವರೆಸಿ ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿ ಅಜ್ಮಲ್‌‌ ಸುಹೈಲ್‌ ಸಿ(19), ಕೋಝೀಕ್ಕೋಡ್‌, ಕೇರಳ ರಾಜ್ಯ ಎಂಬವನನ್ನು ಪತ್ತೆ ಹಚ್ಚಿ, ಆತನಿಂದ ಪ್ರಕರಣದಲ್ಲಿ ಬ್ಯಾಂಕ್‌ ಖಾತೆಗೆ ಜಮೆಗೊಂಡಿರುವ ನಗದು ರೂ 80,000/- ವನ್ನು ಸ್ವಾಧೀನಪಡಿಸಿ ಕೊಂಡಿರುತ್ತಾರೆ.