ಉಡುಪಿ: ಅ.10ರಂದು ಲೋಂಬಾರ್ಡ್ ಮೆಮೋರಿಯಲ್ ಹಾಸ್ಪಿಟಲ್’ನ ಕ್ಯಾಂಟಿನ್ ಉದ್ಘಾಟನೆ

ಉಡುಪಿ, ಅ.9: ಉಡುಪಿಯ ಲೋಂಬಾರ್ಡ್ ಮೆಮೋರಿಯಲ್ ಹಾಸ್ಪಿಟಲ್(ಮಿಷನ್ ಆಸ್ಪತ್ರೆ)ನ ಕ್ಯಾಂಟಿನ್ ಉದ್ಘಾಟನೆ ಅ.10ರಂದು ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ.

ಸಿಎಸ್‌ಐ- ಕೆಎಸ್‌ಡಿಯ ಬಿಷಪ್ ರೆ.ಹೇಮಚಂದ್ರ ಕುಮಾರ್ ಆಶೀರ್ವಚನ ನೀಡಲಿರುವರು. ಕ್ಯಾಂಟಿನ್‌ನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಸಿಎಸ್‌ಐ ಕೆಎಸ್‌ಡಿ ಏರಿಯಾ ಚೈಯರ್‌ಮೆನ್ ರೆ.ಐವನ್ ಡಿ ಸೋನ್ಸ್ ಭಾಗವಹಿಸಲಿರುವರು ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸುನೀಲ್ ಜತ್ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.