ಉಡುಪಿ: ಅಗ್ನಿ ಶಾಮಕ ಠಾಣೆಯಲ್ಲಿ ಆಯುಧ ಪೂಜೆ, ಗಣಹೋಮ ಹಾಗೂ ದುರ್ಗಾ ಪೂಜೆ ಆಚರಣೆ.

ಉಡುಪಿ: ಉಡುಪಿ ಅಗ್ನಿ ಶಾಮಕ ಠಾಣೆ ಕಿನ್ನಿಮೂಲ್ಕಿಯಲ್ಲಿ ಇಂದು ಸಂಸ್ಥೆಯ ಆವರಣದಲ್ಲಿಆಯುಧ ಪೂಜೆಯ ಪ್ರಯುಕ್ತ ವಿಶೇಷ ಹೂವಿನ ಅಲಂಕಾರ, ಉಡುಪಿ ಜಿಲ್ಲಾ ಅಗ್ನಿ ಶಾಮಕ ಠಾಣಾ ಅಧೀಕ್ಷಕ ವಿನಾಯಕ ರವರ ಮಾರ್ಗದರ್ಶನದಲ್ಲಿ ಪ್ರಭಾರ ಅಧಿಕಾರಿಗಳಾದ ರವೀಂದ್ರರವರ ನೇತೃತ್ವದಲ್ಲಿ ಆಯುಧ ಪೂಜೆ, ಗಣಹೋಮ ಹಾಗೂ ದುರ್ಗಾ ಪೂಜೆಯು ಅದ್ದೂರಿಯಾಗಿ ನೆಡೆಯಿತು. ಅಧಿಕಾರಿಗಳು ಸಂಸ್ಥೆಯ ಸಿಬ್ಬಂಧಿಗಳು ಉಪಸ್ಥರಿದ್ದರು.