ಉಡುಪಿ: ಅಂಬೇಡ್ಕರ್ ಗೆ ಅವಮಾನ ಮಾಡಿದ್ದು ಕಾಂಗ್ರೆಸ್ಸ್ ಹೊರತು ಬಿಜೆಪಿ ಅಲ್ಲ: ದಿನಕರ್ ಬಾಬು

ಉಡುಪಿ: ಇಂದು ಸದಾ ಕಾಲ ಅಂಬೇಡ್ಕರ್ ಹೆಸರನ್ನು ಜಪಿಸುವ ಕಾಂಗ್ರೆಸ್ಸ್ ಪಕ್ಷ, ಅಂದು ರಾಷ್ಟ್ರದ ಮೊದಲ ಕ್ಯಾಬಿನೆಟ್ ನಿಂದ ಅಂಬೇಡ್ಕರ್ ಅವರು ರಾಜೀನಾಮೆ ನೀಡುವಂತೆ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ.

ಅಂದಿನ ಕಾಂಗ್ರೆಸ್ಸ್ ಸರ್ಕಾರದ ವಿದೇಶಿ ನೀತಿ, ಆರ್ಟಿಕಲ್ 370 ಯಿಂದ ಅಸಮಾದಾನ ಹೊಂದಿದ್ದು, ಈ ಎಲ್ಲ ಕಾರಣಕ್ಕೆ ರಾಜೀನಾಮೆ ನೀಡಿದರು ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹಲವು ಬಾರಿ ಹೇಳಿದ್ದಾರೆ. ಅಂಬೇಡ್ಕರ ಹಾಗು ರಾಜಾಜಿ ರಾಜೀನಾಮೆ ನೀಡಿದಾಗ, ಕ್ಯಾಬಿನೆಟ್ ದುರ್ಬಲ ಆಗುತ್ತದೆ ಎಂದು ಕೇಳಿದಾಗ ನೆಹರು ಅವರು ರಾಜಾಜಿ ರಾಜೀನಾಮೆ ಸಲ್ಪ ಸಮಸ್ಯೆ ಆಗಬಹುದು ಅಂಬೇಡ್ಕರ್ ಅವರ ರಾಜೀನಾಮೆ ಏನು ಸಮಸ್ಯೆ ಆಗದು ಎಂದು ಹೇಳಿದ್ದು ಸುಳ್ಳೇ..??

ಮುಂದೆ ಅಂಬೇಡ್ಕರ್ ನಿಧನ ಹೊಂದಿದಾಗ ಮುಂಬೈ ಮೇಯರ್ ಸರ್ಕಾರಕ್ಕೆ ಪತ್ರ ಬರೆದು ಅಂಬೇಡ್ಕರ್ ಅವರ ಜನ್ಮ ಸ್ಥಳದಲ್ಲಿ ಸ್ಮಾರಕ ಮಾಡಬೇಕು ಎಂದು ಕೇಳಿಕೊಂಡಾಗ ಇದನ್ನು ನೆಹರು ತಿರಸ್ಕಾರ ಮಾಡಿರುವುದು ರಾಷ್ಟ್ರಕ್ಕೆ ತಿಳಿದಿರುವ ವಿಷಯ. ನಂತರ ಬಿಜೆಪಿ ಸರ್ಕಾರ ಬಂದ ಬಳಿಕ ಸ್ಮಾರಕ ಮಾಡಿರುವುದು ದೇಶದ ಜನತೆಗೆ ತಿಳಿದಿರುವ ಸಂಗತಿಯೇ. ಮುಂದೆ ನವೆಂಬರ್ 26 ಸಂವಿಧಾನ ದಿನ ಆಗಿ ಘೋಷಣೆ ಮಾಡಿರುವುದು ಬಿಜೆಪಿಯೇ. ಕಾಂಗ್ರೆಸ್ಸ್ ತನ್ನ ಪರಿವಾರದವರಿಗೆ ಭಾರತ ರತ್ನ ನೀಡಿ ಅಂಬೇಡ್ಕರ್ ಅವರಿಗೆ ಕೊನೆವರೆಗೆ ನೀಡಲೇ ಇಲ್ಲ. ಬಳಿಕ 90 ರ ದಶಕದಲ್ಲಿ ಬಿಜೆಪಿ ಒತ್ತಾಸೆಯ ಬಳಿಕ ಸಂವಿಧಾನ ಶಿಲ್ಪಿಗೆ ಭಾರತ ರತ್ನ ದೊರಕಿತು ಎಂದು ಅಮಿತ್ ಷಾ ಅವರು ಹೇಳಿದ್ದು. ಆದರೆ ಕೇಂದ್ರ ಗೃಹ ಸಚಿವರು ರಾಜ್ಯ ಸಭೆಯಲ್ಲಿ ಹೇಳಿರುವ ಮಾತನ್ನು ಕಾಂಗ್ರೆಸ್ಸ್ ತಿರುಚಿ, ಜನರಲ್ಲಿ ವಿಷ ಬೀಜ ಬಿತ್ತುವ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ನಾಚಿಕೆ ಗೇಡಿನ ಸಂಗತಿ.

ಚುನಾವಣೆ ಹಾಗೂ ಭಾಷಣದ ಸಮಯದಲ್ಲಿ ಪ್ರಚಾರಕ್ಕೆ ಮಾತ್ರ ಅಂಬೇಡ್ಕರ್ ಅವರನ್ನು ಬಳಸಿ ಕೊಳ್ಳುವ ಕಾಂಗ್ರೆಸ್ಸ್, ಬಿ ಆರ್ ಅಂಬೇಡ್ಕರ್ ಅವರ ಗೌರವಾರ್ಥ ಐತಿಹಾಸಿಕ ಐದು ಸ್ಥಳಗಳನ್ನು ಪಂಚತೀರ್ಥವಾಗಿ ಪರಿವರ್ತನೆ ಮಾಡಲು ಬಿಜೆಪಿ ಬರಬೇಕಾಯಿತು. ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಪರಿಕಲ್ಪನೆಯಂತೆ ಯಾರು ಕೆಲಸ ಕಾರ್ಯ ಮಾಡುತ್ತಿದ್ದಾರೆ? ಇದೆ ಕಾಂಗ್ರೆಸ್ಸ್ ಪಕ್ಷ ಅಂಬೇಡ್ಕರ್ ಅವರನ್ನು ಎರೆಡೆರಡು ಬಾರಿ ಸೋಲಿಸುವ ಮೂಲಕ ತನ್ನ ದುರ್ಬುದ್ಧಿ ತೋರಿಸಿದ್ದು ಮರೆಯಲು ಹೇಗೆ ಸಾಧ್ಯ, ಇದನೆಲ್ಲ ರಾಷ್ಟ್ರಕ್ಕೆ ಮತ್ತೊಮ್ಮೆ ನೆನಪಿಸಿದ್ದನ್ನು ಅರಗಿಸಿಕೊಳ್ಳಲು ಆಗದೆ ತನ್ನ ಹಿಂಬಾಗಿಲಿನ ಮೂಲಕ ತಿರುಚಿದ ಸುದ್ದಿ ಹಬ್ಬಿಸುವುದರೊಂದಿಗೆ ರಾಷ್ಟ್ರದ ಗೃಹ ಸಚಿವರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ನಿಜಕ್ಕೂ ತಲೆ ತಗ್ಗಿಸುವ ಸಂಗತಿ ಎಂದು ರಾಜ್ಯ ಎಸ್ ಸಿ ಮೋರ್ಚಾ ದ ಉಪಾಧ್ಯಕ್ಷರಾದ ದಿನಕರ್ ಬಾಬು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.