ಉಡುಪಿ: ಶ್ರೀಮತಿ ಪ್ರಫುಲ್ಲ.ಕೆ.ವಿ ಅವರು ಡಾ. ಉದಯಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಹಂಪಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ “ಯಕ್ಷಗಾನ ಅಧ್ಯಯನಗಳು: ತಾತ್ವಿಕ ಸ್ವರೂಪ ” ಎಂಬ ವಿಷಯದ ಸಂಶೋಧನಾ ಪ್ರೌಢ ಪ್ರಬಂಧವು ಪಿಯೆಚ್.ಡಿ.ಮಾನ್ಯತೆಯನ್ನು ಪಡೆದಿದೆ.
ಗಮಕ ಕಲಾ ಪರಿಷತ್ತು ಉಡುಪಿ ತಾಲ್ಲೂಕು ಘಟಕದ ಕಾರ್ಯದರ್ಶಿಯಾಗಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿಯನ್ನು ಪಡೆದಿರುವ ಸಾಹಿತಿಯಾಗಿದ್ದಾರೆ.
ಮೂಲತಃ ಕಾಸರಗೋಡಿನವರಾಗಿದ್ದು ಪ್ರಸ್ತುತ ಮಣಿಪಾಲದ ಕುಂಡೇಲು ಗಣಪತಿಭಟ್ ಅವರ ಧರ್ಮಪತ್ನಿ ಹಾಗೂ ಗೃಹಿಣಿಯಾಗಿದ್ದಾರೆ.












