ಉಡುಪಿ:ಶ್ರೀಕೃಷ್ಣ ದರ್ಶನ ಪಡೆದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

ಉಡುಪಿ: ಜಿಲ್ಲಾ ಪ್ರವಾಸದಲ್ಲಿರುವ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬಳಿಕ ಪರ್ಯಾಯ ಶ್ರೀಪಾದರಾದ ಪುತ್ತಿಗೆ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳ ಬಳಿ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದರು.ಫಡ್ನವೀಸ್ ನಂತರ ದೀಕ್ಷೆ ಪಡೆದ ಎರಡನೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಎಂಬುದು ಗಮನಾರ್ಹ ಸಂಗತಿ.

ಮುಖ್ಯಮಂತ್ರಿಗಳ ಕೃಷ್ಣ ದರ್ಶನ ವೇಳೆ ಸ್ಥಳೀಯ ಶಾಸಕ ಯತ್ಪಾಲ್ ಸುವರ್ಣ, ಬೈಂದೂರು ಶಾಸಕ ಗಂಟಿಹೊಳೆ, ಡಾ.ಕೃಷ್ಣಪ್ರಸಾದ್ ಕೂಡ್ಲು ಮತ್ತಿತರರಿದ್ದರು.