ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ನಗರದ ಲಾಡ್ಜ್ವೊಂದರಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಿದ್ದ ಸೈಯದ್ ಇಮ್ರಾನ್ (42) ಎಂಬ ವ್ಯಕ್ತಿಯು ಫೆಬ್ರವರಿ 23 ರಿಂದ ನಾಪತ್ತೆಯಾಗಿರುತ್ತಾರೆ.

170 ಸೆಂ.ಮೀ ಎತ್ತರ, ದಪ್ಪ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.