ಉಡುಪಿಯ ಹಿರಿಯ ನ್ಯಾಯವಾದಿ ಶ್ರೀ ಕುಂಜೂರು ಬಾಲಚಂದ್ರ ರಾವ್ ವಿಧಿವಶ

ಉಡುಪಿ:ಉಡುಪಿಯ ನ್ಯಾಯಾಲಯ ದಲ್ಲಿ ಕಳೆದ 1961 ರಿಂದ ಸಿವಿಲ್ ನ್ಯಾಯವಾದಿ ಯಾಗಿ ಮೇರು ಪ್ರಕರಣಗಳಲ್ಲಿ ವಾದಿಸಿರುವ ಶ್ರೀಯುತ ಕುಂಜೂರು ಬಾಲಚಂದ್ರ ರಾವ್ (89) ಇಂದು ಸಂಜೆ ಅಲ್ಪ ಅಸೌಕ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುತ್ತಾರೆ. ಮೃತರು ಪತ್ನಿ ಮತ್ತು ನಾಲ್ವರು ಪುತ್ರಿಯರು ಮತ್ತು ಅಪಾರ ಶಿಷ್ಯ ವೃಂದ, ಕಕ್ಷಿದಾರರು ಮತ್ತು ಬಂಧು ಬಳಗ ವನ್ನು ಅಗಲಿರುತ್ತಾರೆ. ಮೃತರ ಅಂತ್ಯ ಸಂಸ್ಕಾರವು ನಾಳೆ ದಿನಾಂಕ 25/8/2024 ರಂದು 9 ಗಂಟೆಗೆ ನಡೆಯಲಿರುವುದು.