ಉಡುಪಿಯ ಯುವ ಕಲಾವಿದ ವೆಲ್ರಾಯ್ ಡಿಕ್ಸನ್ ಡಿಸೋಜಾರ ಕುಂಚದಲ್ಲಿ ಮೂಡಿಬಂದ ಲೆಜೆಂಡ್ ರತನ್ ಟಾಟಾ ಚಿತ್ರ

ಉಡುಪಿ: ಕಲೆ ಎಂಬುವುದು ಅಷ್ಟು ಸುಲಭದಲ್ಲಿ ಯಾರಿಗೂ ಒಲಿಯುವುದಿಲ್ಲ. ಆದ್ರೆ ಇಲ್ಲೊಬ್ಬ ಯುವಕ ಯಾವುದೇ ಕಲಿಕೆ, ಗುರು ಇಲ್ಲದೆ, ತಾನಾಗಿಯೇ ಚಿತ್ರಕಲೆಯನ್ನು ಸಿದ್ಧಿಸಿಕೊಂಡಿದ್ದಾನೆ.

ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವೆಲ್ರಾಯ್ ಡಿಕ್ಸನ್ ಡಿಸೋಜಾ ಅವರೇ ಈ ಅದ್ಭುತ ಚಿತ್ರಕಲಾವಿದ. ಚಿತ್ರಕಲೆಯನ್ನು ಯಾವುದೇ ಗುರುಗಳಿಲ್ಲದೆ ತಾವೇ ಕಲಿತು, ಈಗ ತಮ್ಮ ಕಲೆಯ ಪ್ರದರ್ಶನ ಮಾಡುವ ಹಂತಕ್ಕೆ ತಲುಪಿದ್ದಾರೆ. ಕಲೆಯ ಮೇಲಿರುವ ಆಸಕ್ತಿಯೇ ಇಂತಹ ಸಾಧನೆ ಮಾಡಲು ಅವರನ್ನು ಪ್ರೇರೇಪಿಸಿದೆ‌. ವೆಲ್ರಾಯ್ ಡಿಕ್ಸನ್ ಅವರು ಈಗಾಗಲೇ ಹಲವು‌ ಗಣ್ಯರ ಚಿತ್ರಗಳನ್ನು‌ ಬಿಡಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ವೆಲ್ರಾಯ್ ಡಿಕ್ಸನ್ ಅವರ ಕುಂಚದಲ್ಲಿ ಇತ್ತೀಚೆಗೆ ಇಹಲೋಕ ತ್ಯಜಿಸಿದ ಲೆಜೆಂಡ್ ರತನ್ ಟಾಟಾ ಅವರ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಯಾವುದೇ ಬಣ್ಣಗಳನ್ನು ಬಳಸದೆ ಕೇವಲ ಪೆನ್ಸಿಲ್ ನಲ್ಲಿ ಚಿತ್ರಿಸಿದ ಟಾಟಾ ಅವರ ಭಾವಚಿತ್ರ ಎಲ್ಲರ ಕಣ್ಮನ ಸೆಳೆಯುತ್ತಿದೆ.

ನಿಮ್ಮ ಆರ್ಡರ್ ಬುಕ್ ಮಾಡಲು ಈ ಸಂಖ್ಯೆಗೆ ಕರೆ ಮಾಡಿ:7337693481