ಉಡುಪಿಯ ಯಕ್ಷಗಾನ ಕಲಾರಂಗದಿಂದ ಮಕ್ಕಳಿಗೆ ವಿಶೇಷ ತರಬೇತಿ

ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯವರು, ಮಕ್ಕಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸಂಸ್ಥೆಯವರು ಹೈಸ್ಕೂಲ್ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ.

Oplus_131072

ಪ್ರತಿ ಶಾಲೆಯಿಂದ ಆಯ್ದ 60 ಮಕ್ಕಳ ತಂಡಕ್ಕೆ ಒಂದು ವಾರದ ವಿಶೇಷ ಯಕ್ಷಗಾನ ಶಿಬಿರ ಏರ್ಪಡಿಸಿದ್ದಾರೆ. ಯಕ್ಷಗಾನದ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಳವೆಯಲ್ಲೇ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ 16 ಗಂಟೆಗಳಿಗೂ ಅಧಿಕ ಕಾಲ ಯಕ್ಷಗಾನದ ಕುಣಿತ ವೇಷಭೂಷಣ ಮಾತುಗಾರಿಕೆ ಕಲಿಸುವುದರ ಜೊತೆಗೆ ಜೀವನ ಪಾಠ ನೀಡಲಾಗುತ್ತಿದೆ. ಯಕ್ಷ ಶಿಕ್ಷಣ ಪಡೆಯುತ್ತಿರುವ ಪ್ರತಿ ಶಾಲೆಯಿಂದಲೂ ಆಯ್ದ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗಿಯಾಗಿದ್ದಾರೆ.

Oplus_131072

ರಾಜ್ಯದ ಪ್ರಸಿದ್ಧ ಯಕ್ಷಗಾನ ಗುರು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬನ್ನಂಜೆ ಸಂಜೀವ ಸುವರ್ಣ ಹಗಲಿರುಳೆನ್ನದೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಸಾಂಪ್ರದಾಯಿಕ ಯಕ್ಷಗಾನವನ್ನು ಉಳಿಸುವ ನಿಟ್ಟಿನಲ್ಲಿ ಈ ಶಿಬಿರ ಅರ್ಥಪೂರ್ಣವಾಗಿದೆ.

Oplus_131072

ಉಡುಪಿಯಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಶಿಕ್ಷಣದ ರೀತಿಯಲ್ಲಿ ಕಲಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಭಾಷಾ ಶುದ್ಧತೆ ಹೆಚ್ಚಿಸುವಲ್ಲಿ ದಶಕಗಳಿಂದ ಈ ಯೋಜನೆ ಯಶಸ್ವಿಯಾಗಿದೆ. ಹವ್ಯಾಸಿ ರಂಗಭೂಮಿಯನ್ನು ಬೆಳೆಸುವುದರ ಜೊತೆಗೆ, ಸಾಂಪ್ರದಾಯಿಕ ಕಲೆಯನ್ನು ಉಳಿಸಲು ಯಕ್ಷಗಾನ ಕಲಾ ರಂಗ ಪಣತೊಟ್ಟಿದೆ.