ಉಡುಪಿ: ಉಡುಪಿಯ ನಾಗದೇವರ ಸನ್ನಿಧಾನಗಳಲ್ಲಿ ಇಂದು ಸುಬ್ರಹ್ಮಣ್ಯ ಷಷ್ಠಿ ಸಂಭ್ರಮದಿಂದ ಆಚರಿಸಲಾಯಿತು. ಕರಾವಳಿಯ ನಾಗಾಲಯಗಳಲ್ಲಿ ಇಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.
![](https://udupixpress.com/wp-content/uploads/2024/12/1000050527.jpg)
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಹೊಂದಿಕೊಂಡು ನಾಲ್ಕು ನಾಗಾಲಯಗಳಿವೆ. ಈ ಪೈಕಿ ಅತ್ಯಂತ ಪುರಾತನವಾದ ತಾಂಗೋಡು ದೇಗುಲದಲ್ಲಿ ಸಾವಿರಾರು ಜನ ಪೂಜೆ ಸಲ್ಲಿಸಿದರು. ಸುಬ್ರಹ್ಮಣ್ಯನ ಆರಾಧನೆಗೆ ಕರಾವಳಿಯಲ್ಲಿ ವಿಶೇಷ ಮಹತ್ವ ಇದೆ.
![](https://udupixpress.com/wp-content/uploads/2024/12/1000050530.jpg)
ಸನ್ನಿಧಾನದಲ್ಲಿ ವಿಶೇಷ ಅನ್ನ ಸಂತರ್ಪಣೆಯನ್ನು ನಡೆಸಲಾಗುತ್ತದೆ. ತಾಂಗೋಡು ಮಾತ್ರವಲ್ಲದೆ ಮಾಂಗೋಡು, ಅರಿತೋಡು, ಮುಚ್ಲಗೋಡು ದೇವಸ್ಥಾನಗಳಲ್ಲೂ ಸುಬ್ರಮಣ್ಯ ಷಷ್ಟಿ ಆಚರಿಸಲಾಯಿತು. ದೇವರ ಆರಾಧನೆಯ ಜೊತೆಗೆ ಸಂಜೆ ರಂಗಪೂಜೆ, ಹಾಲಿಟ್ಟು ಸೇವೆಗಳನ್ನು ವಿವಿಧ ದೇವಾಲಯಗಳಲ್ಲಿ ನಡೆಸಲಾಯಿತು.