ಉಡುಪಿಯ ಕರಾವಳಿ ಬೈಪಾಸ್ ನಲ್ಲಿ “ಜಂಬೂ ಸರ್ಕಸ್” ಆರಂಭ

ಉಡುಪಿ: ನಗರದ ಕರಾವಳಿ ಬೈಪಾಸ್ ಸಮೀಪದ ಶಾರದ ಇಂಟರ್‌ನ್ಯಾಷನಲ್ ಹೋಟೆಲ್ ಬಳಿ ಜಂಬೂ ಸರ್ಕಸ್ ಆರಂಭವಾಗಿದೆ. ಎಪ್ರಿಲ್ 28 ರವರೆಗೆ ಉಡುಪಿಯಲ್ಲಿ ಮನೋರಂಜನೆ ನೀಡಲು ಸಿದ್ದವಾಗಿದೆ.

ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವ್ಯವಸ್ಥಾಪಕ ಸುರೇಶ್ ಬಾಬು ಅವರು, ದಿನಕ್ಕೆ 1 ಗಂಟೆ, 4 ಗಂಟೆ ಹಾಗೂ 7 ಗಂಟೆಗೆ ಹೀಗೆ 3 ಆಟಗಳು ಪ್ರದರ್ಶನಗೊಳ್ಳಲಿದೆ ಎಂದರು.

ದೇಶ ವಿದೇಶಗಳ 100 ಜನ ಪುರುಷರು ಮತ್ತು ಮಹಿಳಾ ಕಲಾವಿದರ ತಂಡದಿಂದ ಅಮೇರಿಕನ್ ಸ್ಟೇಸ್ ವೀಲ್, ಸೀರೆಯಲ್ಲಿ ಸಾಹಸ, ಡಬ್ಬದ ರಿಂಗ್ ರೋಬೊಟ್, ಪಿಕಾಕ್ ಡ್ಯಾನ್ಸ್, ಗ್ಲೋಬ್ ವೆಲ್ ಬೈಕ್ ಸಾಹಸ, ರೋಲರ್ ಬ್ಯಾಲೆನ್ಸ್, ರೋಲರ್ ಸೇರಿದಂತೆ ಎರಡೂವರೆ ಗಂಟೆ ವಿವಿಧ ಸಾಹಸ ಹಾಗೂ ಮನರಂಜನೆ ಪ್ರದರ್ಶನಗೊಳ್ಳಲಿದೆ. ಮುಂಗಡ ಬುಕ್ಕಿಂಗ್ ಗಾಗಿ (www.bookmyshow.com) ಅಥವಾ 63524 19244, 86670 13077, 62383 47006 ಸಂಪರ್ಕಿಸಬಹುದು ಎಂದು‌ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮ್ಯಾನೇಜರ್ ಗಳಾದ ಟೈಟಸ್ ವರ್ಗೀಸ್, ರಾಜೀವ್ ಉಪಸ್ಥಿತರಿದ್ದರು.