ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು-ಮುಂಡ್ಕಿನಜೆಡ್ಡು-ಕೊಕ್ಕರ್ಣೆ-ನಾಲ್ಕೂರು (ಕೊಕ್ಕರ್ಣೆ-ನಾಲ್ಕೂರು ರಸ್ತೆ) ರಸ್ತೆಯ ಮಾರಾಳಿ ಎಂಬಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಸ್ಲಾಬ್ ಮೋರಿ ನಿರ್ಮಾಣ ಕಾಮಗಾರಿ ಹಿನ್ನೆಲೆ, ಮಾರ್ಚ್ 2 ರಿಂದ ಏಪ್ರಿಲ್ 30 ರ ವರೆಗೆ ಲೋಕೋಪಯೋಗಿ ಇಲಾಖೆಗೆ ಸೇರಿದ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಆರೂರು- ಮುಂಡ್ಕಿನಜೆಡ್ಡು-ಕೊಕ್ಕರ್ಣೆ-ನಾಲ್ಕೂರು ರಸ್ತೆಯ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ, ಸದರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಕೊಕ್ಕರ್ಣೆ-ಮಾರಾಳಿ-ಹೊರ್ಲಾಳಿ-ನಾಲ್ಕೂರು ಜಿಲ್ಲಾ ಪಂಚಾಯತ್ ರಸ್ತೆಯ ಬದಲಿ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.












