ಉಡುಪಿ:ಬ್ರಹ್ಮಾವರದಲ್ಲಿ ಅನ್ನದಾತ ಮಹೋತ್ಸವ ಕಾರ್ಯಕ್ರಮ

ಉಡುಪಿ:ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು, ಮಾರಾಟಗಾರರ ಸಂಘ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ವ್ಯವಹಾರ ಕಚೇರಿ ಸಹಭಾಗಿತ್ವದಲ್ಲಿ ಅನ್ನದಾತ ಮಹೋತ್ಸವ ಬ್ರಹ್ಮಾವರದ ಖಾಸಗಿ ಹಾಲ್ ನಲ್ಲಿ ಮಂಗಳವಾರ ನಡೆಯಿತು. ಪ್ರಮುಖರಾದ ಶೋಭಲತಾ, ಸುಧಾ ಪ್ರಿಯದರ್ಶಿನಿ, ಕೃಷ್ಣರಾಜ ಭಟ್ ಇದ್ದರು.

ಎಸ್ ಬಿ ಐ ಅನ್ನದಾತ ಮಹೋತ್ಸವ 2024 ಕಾರ್ಯಕ್ರಮವನ್ನು ಶ್ರೀಮತಿ ಶೋಭಲತಾ ಅವರು ನಡೆಸಿಕೊಟ್ಟರು.

ಆಹಾರೋದ್ಯಮದಲ್ಲಿ ವಿದ್ಯುತ್ ಇಲಾಖೆಯ ಸೌಲಭ್ಯಗಳ ಮತ್ತು ನಿಯಮಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಶ್ರೀ ಗಣರಾಜ ಭಟ್ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇದರ ಹೊಸ ನಿಯಮಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಶ್ರೀ ವಿವೇಕ್ ಆರ್. ತ್ರಿಮಲ್ಲೆ ಇವರು ನಡೆಸಿಕೊಟ್ಟರು.

ಆಹಾರೋದ್ಯಮಿಗಳಿಗೆ ಸಬ್ಸಿಡಿ ದರದ ಮಾಹಿತಿ:

ಆಹಾರೋದ್ಯಮಿಗಳಿಗೆ ಶೇ.50 ಸಬ್ಸಿಡಿ ದರ ಸಹಿತ ಸಾಲ ಸೌಲಭ್ಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಉಡುಪಿ ಪ್ರಾದೇಶಿಕ ವ್ಯವಹಾರ ಕಚೇರಿ ರೀಜಿನಲ್ ಮ್ಯಾನೇಜರ್ ಶೋಭಲತಾ, ಚೀಫ್ ಮ್ಯಾನೇಜರ್ ಕ್ರೆಡಿಟ್ ಸುಧಾ ಪ್ರಿಯದರ್ಶಿನಿ, ಚೀಫ್ ಮ್ಯಾನೇಜರ್ ಕೃಷ್ಣರಾಜ ಭಟ್, ಚೀಫ್ ಮ್ಯಾನೇಜರ್ ಆರ್‌ಎಸಿಸಿ ಶಿವಕುಮಾರ್‌ ಟಿ, ರಿಲೇಶನ್‌ ಶಿಪ್ ಮ್ಯಾನೇಜರ್ ಶಾಂತಕುಮಾರ್ ಉಡುಪಿ ಮೆಸ್ಕಾಂ ಉಪವಿಭಾಗ – ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಗಣರಾಜ್ ಭಟ್, ಉಡುಪಿ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ಆರ್. ತ್ರಿಮಲ್ಲೆ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್ ಕುಲಾಲ್, ಸತ್ಯಪ್ರಸಾದ್ ಶೆಣೈ, ಶಶಿಕಾಂತ ಜಿ.ನಾಯಕ್‌, ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ್ ಪಿ.ಎಸ್ ಮತ್ತಿತರರು ಉಪಸ್ಥಿತರಿದ್ದರು.

ಮಂಜುನಾಥ್ ಕಾಮತ್‌ ಪಾರ್ಥಿಸಿದರು. ವಿಶ್ವನಾಥ್ ಕುಲಾಲ್ ಸ್ವಾಗತಿಸಿದರು. ದಿವಾಕರ್ ಸನೀಲ್ ವಂದಿಸಿದರು. ದಯಾನಂದ ಕರ್ಕೇರ ನಿರೂಪಿಸಿದರು.