ಉಡುಪಿ:ಬೇಕ್ ದಿ ಬ್ರೈನ್ಸ್ (Bake the Brains)ಯೆಂಬ ಬೇಕರಿ ಹಾಗೂ ಆಹಾರೋದ್ಯಮ ಕ್ಷೇತ್ರದ ಅವಕಾಶ ಮತ್ತು ತರಬೇತಿ ಕಾರ್ಯಕ್ರಮ

ಉಡುಪಿ:25th ಸೆಪ್ಟಂಬರ್ 2024 ರಂದು ಬುಧವಾರ ಸಂಜೆ 3.30 ರಿಂದ 7.30 ರವರೆಗೆ ಬೇಕ್ ದಿ ಬ್ರೈನ್ಸ್ (Bake the Brains.)ಯೆಂಬ ಬೇಕರಿ ಹಾಗೂ ಆಹಾರೋದ್ಯಮ ಕ್ಷೇತ್ರದ ಅವಕಾಶ ಮತ್ತು ತರಬೇತಿ ಕಾರ್ಯಕ್ರಮವನ್ನು,

1.ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು ಹಾಗೂ ಮಾರಾಟಗಾರರ ಸಂಘ (ರಿ). (Udupi District Bakery & Food Manufacturer & Sellers ಅಸೋಸಿಯೇಷನ್.)

2.ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ. (CFTRI – Central Food Technological Research Institute.)

3.ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ. (MSME – Micro, Small & Medium Enterprises.)

4.ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ. (UCCI – Udupi Chamber of Commerce & Industry.)

ಇದರ ಜಂಟಿ ಆಶ್ರಯದಲ್ಲಿ ಬ್ರಹ್ಮಾವರದ ಹೋಟೆಲ್ ಸಿಟಿ ಸೆಂಟರ್ ನ ಚಂದನ್ ಹಾಲ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿಷಯಗಳು.
1. ಬೇಕರಿ ಉತ್ಪನ್ನಗಳ ದೀರ್ಘ ಬಾಳಿಕೆ ಬಗ್ಗೆ.(Preserve For Longer Shelf Life.)
2. ಉತ್ತಮ ಗುಣಮಟ್ಟದ ಉತ್ಪನ್ನಗಳ (Hygienic Product) ತಯಾರಿಕೆಯ ಬಗ್ಗೆ.
3. ವಿನೂತನ ಮಾದರಿಯ ಉತ್ಪನ್ನಗಳ ಪ್ರದರ್ಶನ.(New Trends In Bekary Industry.)
4. ನೂತನ ಶೈಲಿಯ ಪ್ಯಾಕಿಂಗ್ ತಂತ್ರಜ್ಞಾನ. (Latest Packing Technology.)
ಇದರ ಬಗ್ಗೆ ಸಮಗ್ರ ತರಬೇತಿ ಕಾರ್ಯಗಾರ Mr.ಪ್ರಭಾ ಶಂಕರ್ (Food Scientist CFTRI Mysore.),
ಆಹಾರ ಉದ್ಯಮದಲ್ಲಿ ಹಣಕಾಸಿನ ನೆರವು (Financial Assistance In Food Industry.) ಈ ವಿಷಯದ ಬಗ್ಗೆ ಸಮಗ್ರ ಮಾಹಿತಿ Mr. ದೇವರಾಜ್. ಎಮ್ (Joint Director MSME.)ನೀಡಲಿದ್ದಾರೆ.

ಈ ತರಭೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರನ್ನು ಕಡ್ಡಾಯವಾಗಿ ನೊಂದಾಯಿಸತಕ್ಕದ್ದು. ನೊಂದಣಿ ಆದವರಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಪ್ರವೇಶ.
ಜಿಲ್ಲೆಯ ಎಲ್ಲಾ ಬೇಕರಿ ಇಂಡಸ್ಟ್ರಿಯ ಮಾಲೀಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು ಹಾಗೂ ಮಾರಾಟಗಾರರ ಸಂಘ (ರಿ.) ಬ್ರಹ್ಮಾವರ ಇವರು ಈ ಮೂಲಕ ಪ್ರಕಟಿಸಿರುತ್ತಾರೆ.

ಮಾಹಿತಿಗಾಗಿ ಸಂಪರ್ಕಿಸಿರಿ:
+91 97417 61153
+91 94806 76757