ಉಡುಪಿ: ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ ‘ಚೋಯ್ಸ್ ಗೋಲ್ಡ್’ ಚಿನ್ನಾಭರಣದ 7ನೇ ವಿಶಾಲವಾದ ನೂತನ ಮಳಿಗೆ ಸೋಮವಾರ ಉಡುಪಿಯ ಜಾಮಿಯಾ ಮಸೀದಿ ರಸ್ತೆಯ ಮಾರುತಿ ವೀಥಿಕಾದ ವಿ.ಕೆ.ಪ್ಯಾರಡೈಸ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಚಿನ್ನ, ವಜ್ರ, ಬೆಳ್ಳಿ, ವಾಚ್‌ಗಳ ಅಗಾಧ ಸಂಗ್ರಹದೊಂದಿಗೆ ಆರಂಭಿಸಿರುವ ‘ಚೋಯ್ಸ್ ಗೋಲ್ಡ್’ ನಗರದ ಹೃದಯ ಭಾಗದಲ್ಲಿ ಆರಂಭಗೊಳ್ಳುವ ಮೂಲಕ ಉಡುಪಿ ಜನರಿಗೆ ಕೈಗೆಟುಕುವ ದರದಲ್ಲಿ ಚಿನ್ನಾಭರಣಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.
ಸ್ವರ್ಣ ಪ್ರಿಯರನ್ನು ಆಕರ್ಷಿಸುವ ರೀತಿಯಲ್ಲಿ ವಿನೂತನವಾಗಿ ರೂಪುಗೊಂಡಿರುವ ವಿಶಾಲವಾದ ನೂತನ ಮಳಿಗೆಯನ್ನು ಸಯ್ಯದ್ ಶಮೀಮ್ ತಂಗಳ್ ಕುಂಬೋಳ್ ಉದ್ಘಾಟಿಸಿದರು.
ಆ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಯ್ಯದ್ ಶಮೀಮ್ ತಂಗಳ್ ಕುಂಬೋಳ್ ಅವರು, ಇಂದು ಗ್ರಾಹಕರಿಗೆ ಬೇಕಾದಂಥ ನವನವೀನ ಮಾದರಿಯ ಚಿನ್ನಾಭರಣಗಳನ್ನು ನೀಡುವುದರೊಂದಿಗೆ ಗ್ರಾಹಕರನ್ನು ತಮ್ಮ ಕಡೆ ಸೆಳೆಯುವಲ್ಲಿ ‘ಚೋಯ್ಸ್ ಗೋಲ್ಡ್’ ಮುಂಚೂಣಿಯಲ್ಲಿದೆ. ‘ಚೋಯ್ಸ್ ಗೋಲ್ಡ್’ನ ಗುಣಮಟ್ಟ, ಸೇವೆ ಬಗ್ಗೆ ಮಾರುಕಟ್ಟೆಯಲ್ಲಿ ಉತ್ತಮ ಅಭಿಪ್ರಾಯವಿದೆ ಎಂದು ಶುಭ ಹಾರೈಸಿದರು.
ನೂತನ ಮಳಿಗೆಗೆ ಶುಭ ಹಾರೈಸಿ ಆಶೀರ್ವಚನಗೈದ ಪೆರಂಪಳ್ಳಿ ಫಾತಿಮಾ ಚುರ್ಚಿನ ಧರ್ಮಗುರು ರೇ.ಫಾ.ವಿಶಾಲ್ ಲೋಬೊ, ‘ಚೋಯ್ಸ್ ಗೋಲ್ಡ್’ನ ನೂತನ ಮಳಿಗೆ ಆರಂಭ ಉಡುಪಿಗೊಂದು ಗರಿಯಾಗಿದೆ. ಹಲವು ಕಡೆಗಳಲ್ಲಿ ಶಾಖೆ ಇರುವುದನ್ನು ಕಂಡರೆ ಇವರ ಗುಣಮಟ್ಟವನ್ನು ಪರಾಮರ್ಶಿಸಬಹುದು ಎಂದರು.
ದುವಾ ನೆರವೇರಿಸಿದ ಮಂಜೇಶ್ವರದ ಸಯ್ಯದ್ ಪೂಕುಂಚಿ ಕೋಯಾ ತಂಗಳ್ ಅವರು, ಅಶ್ರಫ್ ಎನ್ ಹಾಗು ಶಹೀರ್ ಬಿಎಮ್. ಅವರ ಕಠಿಣ ಪರಿಶ್ರಮದ ಮೂಲಕ ಬೆಳೆದು ಬಂದಿರುವ ‘ಚೋಯ್ಸ್ ಗೋಲ್ಡ್’ 100 ಶಾಖೆಗಳಾಗಿ ಬೆಳಯುವ ಮೂಲಕ ಚಿನ್ನಾಭರಣ ಪ್ರಿಯರಿಗೆ ಗುಣಮಟ್ಟದ ಆಭರಣಗಳನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನಗರ ಸಭಾ ಸದಸ್ಯ ಅಮೃತ ಕೃಷ್ಣ ಮೂರ್ತಿ, ಸತೀಶ್ ಸುವರ್ಣ, ಹಬೀಬ್ ಅಲಿ, ಫರ್ಜಾನ ಹಬೀಬ್ ಅಲಿ, ತನುಜಾ ನೂತನ ಮಳಿಗೆಗೆ ಶುಭ ಹಾರೈಸಿದರು. ‘ಚೋಯ್ಸ್ ಗೋಲ್ಡ್’ನ ಆಡಳಿತ ಪಾಲುದಾರ ಶಹೀರ್ ಬಿಎಮ್. ಸ್ವಾಗತಿಸಿದರು.
‘ಚೋಯ್ಸ್ ಗೋಲ್ಡ್’ನ ಆಡಳಿತ ಪಾಲುದಾರರಾದ ಅಶ್ರಫ್ ಎನ್ ಹಾಗು ಶಹೀರ್ ಬಿಎಮ್. ಈ ವೇಳೆ ಮಾತನಾಡಿ, ಇದೀಗ ಉಡುಪಿಯ ಗ್ರಾಹಕರಿಗೆ 100%ರಷ್ಟು 916 BIS-HUID ಹಾಲ್ ಮಾರ್ಕ್ ಚಿನ್ನಾಭರಣ, ಪ್ರಮಾಣೀಕೃತ ವಜ್ರಾಭರಣ, ನವನವೀನ ಬೆಳ್ಳಿಯ ಆಭರಣ, ವಿವಿಧ ಬ್ರಾಂಡಿನ ವಾಚ್’ಗಳ ವಿಶಾಲ ಸಂಗ್ರಹವಾಗಿದ್ದು, ಗ್ರಾಹಕರನ್ನು ನಗುಮುಖದೊಂದಿಗೆ ಸ್ವಾಗತಿಸಲು ನಾವು ಸಿದ್ಧರಾಗಿದ್ದೇವೆ ಎಂದರು.
ಶುಭಾರಂಭದ ಹಿನ್ನೆಲೆಯಲ್ಲಿ ಗ್ರಾಹಕರು ಖರೀದಿಸುವ ಎಲ್ಲ ಚಿನ್ನಗಳ ಮೇಲಿನ ಮೇಕಿಂಗ್ ಚಾರ್ಜ್(ತಯಾರಿಕಾ ಶುಲ್ಕ)ನಲ್ಲಿ 50%ರಷ್ಟು ಡಿಸ್ಕೌಂಟ್ ಸಿಗಲಿದೆ. ಅದರಲ್ಲೂ ವಿಶೇಷವಾಗಿ ಮದುವೆ ಖರೀದಿಗೆ ಮೇಕಿಂಗ್ ಚಾರ್ಜ್(ತಯಾರಿಕಾ ಶುಲ್ಕ)ನ ಮೇಲೆ 7.8%ರಷ್ಟು ವಿಶೇಷ ರಿಯಾಯಿತಿ ದೊರಕಲಿದೆ. ಡೈಮಂಡ್ ಪರ್ ಕ್ಯಾರಟ್ ಜುವೆಲ್ಲರಿ ಖರೀದಿಗೆ ಗ್ರಾಹಕರಿಗೆ ಬರೋಬರಿ 21ಸಾವಿರ ಡಿಸ್ಕೌಂಟ್ ಸಿಗಲಿದೆ ಎಂದರು.
ಸ್ವರ್ಣ ನಿಧಿ ಸ್ಕೀಮಿಗೆ ಸೇರುವ ಗ್ರಾಹಕರಿಗೆ ಯಾವುದೇ ಮೇಕಿಂಗ್ ಚಾರ್ಜ್ ಇರದೇ ಚಿನ್ನಾಭರಣ ಸಿಗುತ್ತೆ. ಉದ್ಘಾಟನೆ ದಿನ ಶೋರೂಮ್’ಗೆ ಭೇಟಿ ನೀಡುವ ಅದೃಷ್ಟವಂತ ಗ್ರಾಹಕರಿಗೆ ಪ್ರತಿ ಗಂಟೆಗೊಂದು ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶವೂ ಇದೆ ಎಂದು ತಿಳಿಸಿದರು.