ಉಡುಪಿ:ತ್ರಿಶಾ ಕ್ಲಾಸಸ್: ಸಿಎ ಫೌಂಡೇಶನ್ ತರಗತಿ ಆರಂಭ

ಉಡುಪಿ:ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಜೊತೆ ಕೌಶಲ್ಯಾಧಾರಿತ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೂ ಒತ್ತು ನೀಡುತ್ತಾ ಬಂದಿರುವ ಸಂಸ್ಥೆ ತ್ರಿಶಾ ಸಂಸ್ಥೆ. ಈ ವಿದ್ಯಾ ಸಂಸ್ಥೆಯು ವೃತ್ತಿಪರ ಶಿಕ್ಷಣದೊಂದಿಗೆ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ನೀಡುತ್ತಿದ್ದು ಸುಮಾರು 80,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿದ್ದು, ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ವೃತ್ತಿಪರ ಜೀವನವನ್ನು ನಡೆಸುತ್ತಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಈ ಬಾರಿ ಏಪ್ರಿಲ್ 6 ರಂದು ಸಿಎ ಫೌಂಡೇಶನ್ ತರಗತಿಗಳು ಆರಂಭವಾಗುತ್ತಿದೆ.

ತರಗತಿಯ ವಿಶೇಷತೆಗಳು:
• ನುರಿತ ಪ್ರಾಧ್ಯಾಪಕ ವೃಂದ.
• ವಿದ್ಯಾರ್ಥಿಗಳಿಗೆ ಸ್ಟಡಿ ಮೆಟಿರಿಯಲ್ ಗಳೊಂದಿಗೆ ರಿವಿಷನ್ ಪುಸ್ತಕ ಲಭ್ಯ.
• ಪರೀಕ್ಷೆಗೆ ಪೂರಕವಾಗಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನಗಳನ್ನು ಹೇಳಿಕೊಡಲಾಗುತ್ತದೆ.
• ಮಾಕ್ ಟೆಸ್ಟ್ ಸರಣಿ ಹಾಗೂ ಎಲ್ಲಾ ವಿಷಯಗಳ ಕುರಿತು ರಿವಿಶನ್ ತರಗತಿಗಳು.
• ಉತ್ತಮ ಫಲಿತಾಂಶ.
• ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ.

ಅಖಿಲ ಭಾರತ ಮಟ್ಟದಲ್ಲಿ ರ್ಯಾಂಕ್ ತ್ರಿಶಾ ಸಂಸ್ಥೆಯು ಸಿಎ ಫೌಂಡೇಶನ್, ಸಿಎ ಇಂಟರ್ ಮೀಡಿಯೇಟ್, ಸಿಎ ಫೈನಲ್, ಸಿಎಸ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಒಟ್ಟು 16 ಅಖಿಲ ಭಾರತ ಮಟ್ಟದ ರ್ಯಾಂಕ್ ಗಳನ್ನು ಗಳಿಸಿಕೊಂಡಿದ್ದು, 2025-26 ರ ಜನವರಿಯಲ್ಲಿ ನಡೆದ CA ಫೌಂಡೇಶನ್ ಪರೀಕ್ಷೆಯಲ್ಲಿ 41.17% ಹಾಗೂ ಸಿಎ ಇಂಟರ್ಮೀಡಿಯಟ್ ಪರೀಕ್ಷೆಯಲ್ಲಿ ಶೇ. 43.4% ಫಲಿತಾಂಶವನ್ನು ಪಡೆದುಕೊಂಡಿದೆ.

ಪ್ರಸ್ತುತ ಸಾಲಿನ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ , ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿಗೆ ಅಥವಾ ಮಂಗಳೂರಿನ ಕೊಟ್ಟಾರದ ವಿದ್ಯಾರ್ಥಿ ಗ್ರಾಮದಲ್ಲಿರುವ ತ್ರಿಶಾ ಕ್ಲಾಸಸ್ ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.