ಉಡುಪಿ: ಬೆಂಕಿ ಕಾಲದ ಕಾರಣದಿಂದ ಚಾರಣಿಗರ ಕ್ಷೇಮವನ್ನು ಗಮನದಲ್ಲಿರಿಸಿಕೊಂಡು ನಿರ್ಬಂಧಿಸಲಾಗಿದ್ದ ಕುದುರೆಮುಖ ವನ್ಯಜೀವಿ ವಿಭಾಗದ ವಿವಿಧ ಚಾರಣ ಪಥಗಳಾದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್, ನರಸಿಂಹಪರ್ವತ, ಹಿಡ್ಲುಮನೆ
ಫಾಲ್ಸ್ ಹಾಗೂ ಕೊಡಚಾದ್ರಿ ಟ್ರೆಕ್ಕ್ಗಳನ್ನು ಪ್ರಸ್ತುತ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸಂಭವಿಸಿರುವ ಹಿನ್ನೆಲೆ, ಮೇ 01
ರಿಂದ ಜಾರಿಗೆ ಬರುವಂತೆ ಚಾರಣಿಗರಿಗೆ ವೀಕ್ಷಣೆ ಸಲುವಾಗಿ ಮುಕ್ತಗೊಳಿಸಲಾಗಿದ್ದು, ಪ್ರವಾಸಿಗರು ಆನ್‌ಲೈನ್ https://aranyavihara.karnataka.gov.in
ಮೂಲಕ ಟಿಕೆಟ್ ಕಾಯ್ದಿರಿಸಿ ಚಾರಣ ಮಾಡಬಹುದಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.












