ಉಡುಪಿ:ಉಡುಪಿಯ ಹೆಸರಾಂತ ಸಂಸ್ಥೆ ನ್ಯಾಷನಲ್ ಎಕ್ವಿಪ್‌ಮೆಂಟ್ಸ್ ನಲ್ಲಿ ವಿವಿಧ ವಿಷಯಗಳ ಬಗ್ಗೆ ತರಬೇತಿ ಕಾರ್ಯಕ್ರಮ

ಉಡುಪಿ:ಉಡುಪಿಯ ಹೆಸರಾಂತ ಸಂಸ್ಥೆ ನ್ಯಾಷನಲ್ ಎಕ್ವಿಪ್‌ಮೆಂಟ್ಸ್ ಕಳೆದ 30 ವರ್ಷಗಳಿಂದ ಕಮರ್ಷಿಯಲ್ ಹೀಟ್ ಪಂಪ್, ಡೀಪ್ ಫ್ರೀಜರ್, ಕಿಚನ್ ಉಪಕರಣಗಳು ಇತ್ಯಾದಿ ಸಲಕರಣೆಗಳ ಉತ್ಪಾದನಾ ಘಟಕವನ್ನು ಹೊಂದಿದ್ದು ಪ್ರಸ್ತುತ ವರ್ಷದಿಂದ ಈ ಕ್ಷೇತ್ರದ ಬಗ್ಗೆ ತರಬೇತಿ ಪಡೆಯಲು ಇಚ್ಚಿಸುವವರಿಗಾಗಿ ಒಂದು ಹೊಸ ಅವಕಾಶವನ್ನು ಒದಗಿಸುತ್ತಿದೆ.

ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ITI/Diploma SSLC/PUC ಪಾಸ್ ಅಥವಾ ಫೇಲ್ ಆದ ವಿದ್ಯಾರ್ಥಿಗಳೂ ಸೇರಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ತರಬೇತಿ ಮತ್ತು ತಿಂಗಳಿಗೆ ರೂಪಾಯಿ 3,000/- ಸ್ಟೈಫಂಡ್‌ನೊಂದಿಗೆ ಪೂರ್ಣ ಪ್ರಮಾಣದ ತರಬೇತಿಯನ್ನು ನೀಡಲಿದೆ. ಆರಂಭಿಕ ತರಬೇತಿಯು 6 ತಿಂಗಳವರೆಗೆ ಇರುತ್ತದೆ.

ತರಬೇತಿಯ ವಿಷಯಗಳು:

▪ ಹೀಟ್ ಪಂಪ್ ಅಳವಡಿಕೆ, ರಿಪೇರಿ, ಜೋಡಣೆ ಮತ್ತು ನಿರ್ವಹಣೆ.

▪ ಕಿಚನ್ ಉಪಕರಣಗಳ ತಯಾರಿಕಾ ತರಬೇತಿ

▪ ವೆಲ್ಡಿಂಗ್ ತರಬೇತಿ (ಗ್ಯಾಸ್, ಟಿಗ್ ಮಿಗ್ ಆರ್ಕ್, ಲೇಸರ್ ಕಟಿಂಗ್ ಮತ್ತು ಲೇಸರ್ ವೆಲ್ಡಿಂಗ್)

▪ವಿವಿಧ ರೀತಿಯ ಕೂಲಿಂಗ್ ಉಪಕರಣಗಳ ತಯಾರಿಕೆ ಮತ್ತು ದುರಸ್ತಿಗಾಗಿ ತರಬೇತಿಯನ್ನು ನೀಡಲಿದೆ.

ತರಬೇತಿಯ ನಂತರ ಆಯ್ಕೆಯಾದವರಿಗೆ ಉದ್ಯೋಗಾವಕಾಶವನ್ನೂ ನೀಡಲಾಗುವುದು.

ಆಸಕ್ತರು ಸಂಪರ್ಕಿಸಿ :

+91 9880348563 | +91 9731323418