ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ರಥೋತ್ಸವ- ಮಹಾಪೂಜೆ, ಪಲ್ಲಪೂಜೆ ಸಂಪನ್ನ

ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ಮಹಾಲಕ್ಷ್ಮೀ ರಥೋತ್ಸವ ಸಂಪನ್ನಗೊಂಡಿತು.

ದೇಗುಲದ ತಂತ್ರಿಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಅವರ ನೇತೃತ್ವದಲ್ಲಿಪ್ರಾತಃಕಾಲ ಪೂಜೆ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಸಹಸ್ರ ಪುಷ್ಪಾರ್ಚನೆ, ಮಹಾಪೂಜೆ, ಪಲ್ಲಪೂಜೆ, ಸಾಮೂಹಿಕ ಪ್ರಾರ್ಥನೆ, ರಥಾರೋಹಣ ಬಲಿ, ನೃತ್ಯ ದರ್ಶನ ನಡೆದವು.

ಬಳಿಕ ಮಹಾಲಕ್ಷ್ಮೀ ರಥಾರೋಹಣ, ಭಜನಾ ಕಾರ್ಯಕ್ರಮ ನಡೆಯಿತು. ಭದ್ರಕಾಳಿ ಅಮ್ಮನವರ ದರ್ಶನ, ರಥಕ್ಕೆ ಅಜಕಾಯಿ ಸಮರ್ಪಣೆ, ಶ್ರೀ ಮನ್ಮಹಾರಥೋತ್ಸವ ಉತ್ಸವ ಬಲಿ ಸೇವೆ ನಡೆಯಿತು. ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಭಾಗಿಯಾದರು.