ಇಲಾಖಾ ದರದಲ್ಲಿ ತೋಟಗಾರಿಕಾ ಸಸಿಗಳು ಲಭ್ಯ..

ಉಡುಪಿ: ತೋಟಗಾರಿಕಾ ಇಲಾಖೆಯ ವತಿಯಿಂದ ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ವಿವಿಧ ತೋಟಗಾರಿಕೆ ಕಸಿ ಹಾಗೂ ಸಸಿ ಗಿಡಗಳನ್ನು ಉತ್ಪಾದಿಸಿ ಇಲಾಖಾ ದರದಲ್ಲಿ ಮಾರಾಟ
ಮಾಡಲಾಗುತ್ತಿದೆ. ಉಡುಪಿ ತಾಲೂಕಿನ ಶಿವಳ್ಳಿ, ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ, ಕುಂದಾಪುರ ತಾಲೂಕಿನ ಕುಂಭಾಶಿ ಮತ್ತು ಕೆದೂರು ಹಾಗೂ ಕಾರ್ಕಳ ತಾಲೂಕಿನ ರಾಮಸಮುದ್ರ ಹಾಗೂ ಕುಕ್ಕಂದೂರು ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆ (ರೂ.25), ಕಸಿಗೇರು (ರೂ.32), ಕಾಳುಮೆಣಸು (ರೂ.11) ಹಾಗೂ ತೆಂಗು (ರೂ.75) ಸಸಿಗಳನ್ನು ಉತ್ಪಾದಿಸಲಾಗಿದ್ದು, ಗಿಡಗಳನ್ನು ಖರೀದಿಸಲು ಸಂಬಂದಪಟ್ಟ ತೋಟಗಾರಿಕೆ ಕ್ಷೇತ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಹಾಗೂ ಕಾಳುಮೆಣಸು ಗಿಡಗಳು ಲಭ್ಯವಿದ್ದು, ಮೊ.7892326323 ಅನ್ನು, ವಾರಂಬಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕಾಳುಮೆಣಸು ಹಾಗೂ ತೆಂಗು ಗಿಡಗಳು ಲಭ್ಯವಿದ್ದು, ಮೊ. 8527225123 ಅನ್ನು, ಕೆದೂರು ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಹಾಗೂ ಕಾಳುಮೆಣಸು ಗಿಡಗಳು ಲಭ್ಯವಿದ್ದು, ಮೊ.9482166313 ಅನ್ನು, ಕುಂಭಾಶಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕಾಳುಮೆಣಸು ಹಾಗೂ ತೆಂಗು ಗಿಡಗಳು ಲಭ್ಯವಿದ್ದು, ಮೊ.8792644127 ಅನ್ನು, ರಾಮಸಮುದ್ರ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕಸಿಗೇರು ಹಾಗೂ ಕಾಳುಮೆಣಸು ಗಿಡಗಳು ಲಭ್ಯವಿದ್ದು ಮೊ.7892326323 ಮತ್ತು ಕುಕ್ಕಂದೂರು ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕಾಳುಮೆಣಸು ಹಾಗೂ ತೆಂಗು ಗಿಡಗಳು ಲಭ್ಯವಿದ್ದು, ಮೊ. 7996394553 ಅನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.