ನವದೆಹಲಿ: ಇಯರ್‌ಫೋನ್ ಮತ್ತು ಹೆಡ್‌ಫೋನ್ ಗಳ ಅತಿಯಾದ ಬಳಕೆಯಿಂದ ಜನರಲ್ಲಿ ಶ್ರವಣ ದೋಷ ಉಂಟಾಗುತ್ತಿದೆ ಎಂದಿರುವ ಕೇಂದ್ರ ಆರೋಗ್ಯ ಸಚಿವಾಲಯ. ಇದರ ದೀರ್ಘಕಾಲದ ಬಳಕೆ ವಿರುದ್ಧ ಜಾಗೃತಿ ಮೂಡಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

‘ಆಡಿಯೋ ಸಾಧನಗಳ ಅತಿಯಾದ ಬಳಕೆಯಿಂದ ಜನರಲ್ಲಿ ಸರಿಪಡಿಸಲಾಗದಂತಹ ಶ್ರವಣದೋಷ ಉಂಟಾಗುತ್ತಿದೆ. ಯುವಕರಲ್ಲಿ ಇದು ಅತಿಯಾಗಿದೆ. 50 ಡೆಸಿಬಲ್‌ಗಳಿಗೆ ಹಾಗೂ ದಿನಕ್ಕೆ 2 ಗಂಟೆ ಮೀರದಂತೆ ಈ ಸಾಧನಗಳನ್ನು ಬಳಸಬೇಕು. ಆಗಾಗ ವಿರಾಮ ತೆಗೆದುಕೊಳ್ಳಬೇಕು’ ಎಂದು ಆರೋಗ್ಯ ಸಚಿವಾಲಯ ಹೇಳಿದೆ.












