ಬ್ರಹ್ಮಾವರದಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಶನಲ್ ರಾಷ್ಟ್ರೀಯ ಸಮ್ಮೇಳನ – ಚಿತ್ತಾರ

ಉಡುಪಿ:ಸೀನಿಯರ್ ಛೇಂಬರ್ ಇಂಟರ್‌ ನ್ಯಾಶನಲ್ ಉಡುಪಿ ಟೆಂಪಲ್ ಸಿಟಿ ಲೀಜನ್‌ನ ಆತಿಥ್ಯದಲ್ಲಿ 24ನೇ ರಾಷ್ಟ್ರೀಯ ಸಮ್ಮೇಳನ ಮಾರ್ಚ್ 8 ಮತ್ತು 9 ರಂದು ಬ್ರಹ್ಮಾವರದ ಹೋಟೆಲ್ ಆಶ್ರಯದ ಆನಂದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಜೆ 4.30ಕ್ಕೆ ಉದ್ಘಾಟನೆಗೊಳ್ಳಲಿದೆ. ಸಮ್ಮೇಳನದ ಪೂರ್ವಭಾವಿ ಮಧ್ಯಾಹ್ನ 3 ಗಂಟೆಗೆ ಬ್ರಹ್ಮಾವರದ ಗಾಂಧಿ ಮೈದಾನದಿಂದ ವಾಹನ ಜಾಥಾ ಸಮ್ಮೇಳನದ ಸಭಾಂಗಣದವರೆಗೆ ಸಾಗಿ ಬರಲಿದೆ.

ಸಮ್ಮೇಳನದ ಉದ್ಘಾಟನೆಯನ್ನು ಕೇರಳ ಕಲ್ಚರ್ ಮತ್ತು ಸೋಶಿಯಲ್ ಸೆಂಟರ್ (ರಿ.) ಉಡುಪಿ ಇದರ ಅಧ್ಯಕ್ಷ ಲಯನ್ ಸುಗುಣ ಕುಮಾರ್ ಉದ್ಘಾಟಿಸಲಿರುವರು. ಸಭಾಧ್ಯಕ್ಷತೆಯನ್ನು ಸೀನಿಯರ್ ಛೇಂಬರ್ ಇಂಟರ್‌ನ್ಯಾಶನಲ್‌ ಅಧ್ಯಕ್ಷ ಚಿತ್ರಕುಮಾರ್ ವಹಿಸಲಿದ್ದು, ಮಖ್ಯ ಅತಿಥಿಯಾಗಿ ಆಗಮಿಸಲಿರುವ ಮೂಡುಬಿದ್ರೆ ಎಕ್ಸಲೆಂಟ್ ಕಾಲೇಜಿನ ಚೇರ್‌ಮೆನ್ ಯುವರಾಜ್ ಜೈನ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಪೂರ್ವ ರಾಷ್ಟ್ರೀಯ ಅಧ್ಯಕ್ಷರುಗಳಾದ ಡಾ| ಅರವಿಂದ ರಾವ್ ಕೇದಿಗೆ, ಸಿ.ಎ. ಜಯರಾಜನ್ ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ ಸುಮಾರು 1200 ಪ್ರತಿನಿಧಿಗಳು ಭಾಗವಹಿಸಲಿದ್ದು, ಸಮ್ಮೇಳನದಲ್ಲಿ ವ್ಯವಹಾರ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಬಿ. ಎಂ. ಭಟ್ ಬ್ರಹ್ಮಾವರ ಇವರಿಗೆ ‘ಬ್ಯುಸಿನೆಸ್ ಐಕಾನ್ ರಾಷ್ಟ್ರೀಯ ಪ್ರಶಸ್ತಿ’ ನೀಡಲಾಗುವುದು. ವಿವಿಧ ವಿನೋದಾವಳಿ ಸ್ಪರ್ಧೆಗಳು, ಖ್ಯಾತ ನೃತ್ಯ ತಂಡಗಳಿಂದ ಮನರಂಜನೆ ಕಾರ್ಯಕ್ರಮ, 2024-25ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭ. 2025-2026ನೇ ಸಾಲಿನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ – ಸ್ಥಾನಗಳಿಗೆ ಚುನಾವಣೆ ಜರುಗಲಿದ್ದು, ಚುನಾವಣಾಧಿಕಾರಿ ಯಾಗಿ ವರ್ಗೀಸ್ ವೈದ್ಯನ್ , ಕರ್ತವ್ಯ
ನಿರ್ವಹಿಸಲಿದ್ದಾರೆ.

ಸಮ್ಮೇಳನದಲ್ಲಿ ರಾಷ್ಟ್ರೀಯ ಆಡಳಿತ ವಿಭಾಗದ ಪ್ರಮುಖರಾದ ನವೀನ್ ಅಮೀನ್ ಶಂಕರಪುರ, ರಾಜೇಶ್ ವೈಭವ್, ಜೋಸ್ ಕಂಡೋತ್, ನಾಗೇಶ್ ಮೈಸೂರು ಭಾಗವಹಿಸಲಿದ್ದಾರೆಂದು ಸಮ್ಮೇಳನದ ಆತಿಥ್ಯ ವಹಿಸಿದ ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಉಡುಪಿ ಟೆಂಪಲ್‌ ಸಿಟಿ ಅಧ್ಯಕ್ಷ ಸಂತೋಷ್‌ ಕುಮಾರ್, ಸಮ್ಮೇಳನದ ಮಹಾನಿರ್ದೇಶಕ ಜಗದೀಶ್ ಕೆಮ್ಮಣ್ಣು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.