ಉಡುಪಿ: ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ ಹಾಗೂ ಕಲ್ಕೂರ ರೆಫ್ರಿಜರೇಶನ್ ಆ್ಯಂಡ್ ಕಿಚನ್ ಇಕ್ವಿಪ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ “ಹುಲಿ ವೇಷ ನರ್ತನ ಪ್ರದರ್ಶನ” ಆ.27ರಂದು ಸಂಜೆ 4ಗಂಟೆಯಿಂದ ಉಡುಪಿಯ ರಥಬೀದಿಯ ತೊಟ್ಟಿಲು ಸುಬ್ರಾಯ ವೇದಿಕೆಯಲ್ಲಿ ನಡೆಯಲಿದೆ ಎಂದು ಕಲ್ಕೂರ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ರಂಜನ್ ಕಲ್ಕೂರ್ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ನಿಬಂಧನೆಗಳಿಲ್ಲದೆ – ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಕುಣಿಯುವ ಎಲ್ಲಾ ತಂಡಗಳಿಗೆ ಪ್ರದರ್ಶನಕ್ಕೆ ಮುಕ್ತ ಅವಕಾಶ ಒದಗಿಸಲಾಗಿದೆ. ತಂಡದ ಹುಲಿ ವೇಷಧಾರಿಗಳ, ತಾಸೆ, ವಾದ್ಯ ಇತ್ಯಾದಿ ಹಿಮ್ಮೇಳ ವಾದಕರ ಸಂಖ್ಯೆ, ಪ್ರದರ್ಶನದ ಅವಧಿ ಮತ್ತು ಗುಣಮಟ್ಟವನ್ನು ಗಮನಿಸಿ ಸೂಕ್ತ ಆಕರ್ಷಕ ಸಂಭಾವನೆಯನ್ನು ನೀಡಲಾಗುವುದು. ಜೊತೆಗೆ ಎಲ್ಲಾ ವೇಷಧಾರಿಗಳಿಗೆ ನೀರು ಮತ್ತು ಹಣ್ಣಿನ ವ್ಯವಸ್ಥೆ ಮಾಡಲಾಗುವುದು. ಪ್ರತಿಯೊಬ್ಬ ಹುಲಿ ವೇಷಧಾರಿಗೂ ಸಂಸ್ಥೆಯು ಓಂ ನಾಮಾಕ್ಷರದ ಫಲಕ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮುಖ್ಯಸ್ಥ ರಾಹುಲ್ ಕಲ್ಕೂರ್, ರಾಮಚಂದ್ರ ಉಪಾಧ್ಯ, ಚಂದ್ರಕಾಂತ್ ಕೆ.ಎನ್. ಉಪಸ್ಥಿತರಿದ್ದರು.