ಉಡುಪಿ: ಒಂಬತ್ತು,ಹತ್ತು,ಪಿಯುಸಿ, ಸಿಯಿಟಿ,ಜೆಯಿಯಿ,ನೀಟ್ ಹಾಗೂ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಠ ಫಲಿತಾಂಶ ಪಡೆಯುತ್ತಿರುವ ಉಡುಪಿಯ ಪ್ರಸಿದ್ಧ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್ ಸಂಸ್ಥೆ ವತಿಯಿಂದ ಇದೇ ಬರುವ ಫೆಬ್ರವರಿ ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಪ್ರಥಮ ಪಿಯುಸಿಯ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಈ ಪರೀಕ್ಷೆಗೂ ಎರಡುವಾರ ಮುಂಚಿತವಾಗಿ ರಿವಿಷನ ವರ್ಕಶಾಪ್ (ಪರೀಕ್ಷಾ ಪೂರ್ವಭಾವಿ ಕಾರ್ಯಾಗಾರ) ಆಯೋಜಿಸಲಾಗಿದೆ.
ಇದೇ ಬರುವ ಫೆಬ್ರವರಿ 2ನೇ ತಾರೀಖು ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದರ ವರೆಗೆ ಈ ತರಬೇತಿಯು ಜರಗಲಿದೆ.ಫಿಸಿಕ್ಸ್ ಕೆಮಿಸ್ಟ್ರಿ ಮಾತ್ಸ್ ಹಾಗೂ ಬಾಯಲಜಿ ವಿಷಯವಾಗಿ ಪ್ರತಿಭಾನ್ವಿತ ಉಪನ್ಯಾಸಕರಿಂದ ಈ ತರಬೇತಿಯು ಆಯೋಜನೆಗೊಂಡಿದೆ.ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗರಿಷ್ಠ ಅಂಕಗಳಿಸಬೇಕೆಂಬ ಉದ್ದೇಶದಿಂದ ಈ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.ಈ ತರಬೇತಿಯಲ್ಲಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಿರೀಕ್ಷಿಸಲಾಗುವ ವಿವಿಧ ಅಂಕಗಳ ಅತೀಪ್ರಮುಖ ಪ್ರಶ್ನೆಗಳು ಹಾಗೂ ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಿಖರವಾಗಿ ಬರೆಯುವ ಕುರಿತು ಕಾರ್ಯಾಗಾರವು ರೂಪುಗೊಂಡಿದೆ.
ಜೊತೆಗೆ ಪರೀಕ್ಷೆಗೆ ಸಿದ್ಧತೆ, ಓದುವ ಕ್ರಮ,ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ರೀತಿ ನೀತಿ ಕ್ರಮಗಳ ಬಗ್ಗೆಯೂ ಕೂಡಾ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಲಭಿಸಲಿದೆ.












