ಉಡುಪಿ: ಪ್ರತೀವರ್ಷ ಅಷ್ಠಮಿಯ ದಿನದಂದು ವಿಶಿಷ್ಟ ವೇಷ ತೊಟ್ಟು ಅನಾರೋಗ್ಯಪೀಡಿತ ಮಕ್ಕಳಿಗೆ ಹಣ ಸಂಗ್ರಹಿಸುವ ರವಿ ಕಟಪಾಡಿ ಈ ಬಾರಿ ಅವತಾರ್ 2 ವೇಷಧಾರಿಯಾಗಿ ನಗರ ಸಂಚಾರ ಮಾಡುತ್ತಿದ್ದಾರೆ.
ಹಕ್ಕಿಯ ಮೇಲೆ ಬಾನೆತ್ತರಲ್ಲಿ ಹಾರಿಕೊಂಡು ಬರುವ ‘ಅವತಾರ್ 2’ ವೇಷಧಾರಿ ರವಿ ಕಟಪಾಡಿ ಅವರು ಕಟಪಾಡಿ, ಶಂಕರಪುರ, ಉದ್ಯಾವರ ಮತ್ತಿತರೆಡೆ ಸಂಚರಿಸಿ ಮನೋರಂಜನೆ ನೀಡುತ್ತಿದ್ದಾರೆ. ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸುತ್ತಿದ್ದಾರೆ.


ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಕಳೆದ 9 ವರ್ಷಗಳಲ್ಲಿ 130 ಮಕ್ಕಳಿಗೆ 1 ಕೋಟಿ 28 ಲಕ್ಷ ರೂ.ವೈದ್ಯಕೀಯ ಸಹಾಯ ಹಸ್ತ ನೀಡಿ ವೆಚ್ಚ ಭರಿಸಿದ್ದರು. ಮಟ್ಟು ದಿನೇಶ್ ಇವರ ಅವತಾರಕ್ಕೆ ಬಣ್ಣ ಬಳಿದಿದ್ದು ಈ ವೇಷ ಭಾರೀ ಗಮನ ಸೆಳೆಯುತ್ತಿದೆ.













