ಅಮಾಸೆಬೈಲು: ಹೊಸಂಗಡಿ ಕೆಪಿಸಿ ಶಾಲೆಯ ಗೌರವ ಶಿಕ್ಷಕಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.10ರಂದು ರಾತ್ರಿ ವೇಳೆ ಕೆಪಿಸಿ ಕಾಲೋನಿಯಲ್ಲಿ ನಡೆದಿದೆ.
ಮೃತರನ್ನು ಕೆಪಿಸಿ ಕಾಲೋನಿಯ ನಿವಾಸಿ ರಂಗಸ್ವಾಮಿ ಎಂಬವರ ಪತ್ನಿ ಸವಿತಾ(40) ಎಂದು ಗುರುತಿಸಲಾಗಿದೆ.
ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಕೆಪಿಸಿ ವಸತಿ ಗೃಹದ ಹಾಲ್ ನಲ್ಲಿರುವ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.