ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕ್ಷ್ಮಿ ನಿವಾಸ’ ಖ್ಯಾತಿಯ (ಚಿನ್ನುಮರಿ) ಚಂದನಾ

ಬೆಂಗಳೂರು: ರಾಜಾ ರಾಣಿ’, ಹೂ ಮಳೆ ಮತ್ತು ಲಕ್ಷ್ಮಿ ನಿವಾಸ ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಬಿಗ್ ಬಾಸ್ ಸ್ಪರ್ಧಿ ಚಂದನಾ ಅನಂತಕೃಷ್ಣ ಇಂದು (ನವೆಂಬರ್ 28) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ಚಂದನಾ ಅನಂತಕೃಷ್ಣ ಮತ್ತು ಪ್ರತ್ಯಕ್ಷ್‌ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ದಿನಾಂಕ ಫಿಕ್ಸ್‌ ಆಗುವವರೆಗೂ ತಮ್ಮ ಪ್ರೀತಿ ವಿಚಾರವನ್ನು ಸೀಕ್ರೆಟ್‌ ಆಗಿಟ್ಟಿದ್ದರು. ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಇರುವ ಗುರು ನರಸಿಂಹ ಕಲ್ಯಾಣ ಮಂದಿರಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ.

ಸಿನಿಮಾ ಹಾಗೂ ಕಿರುತೆರೆ ಸ್ನೇಹಿತರು ಮದುವೆಯಲ್ಲಿ ಭಾಗಿಯಾಗಿದ್ದಾರೆ. ಮದುವೆಯಲ್ಲಿ ಚಂದನಾ ಎರಡು ಸೀರೆಯನ್ನು ಧರಿಸಿದ್ದಾರೆ. ಆರಂಭದಲ್ಲಿ ಹಳದಿ ಬಣ್ಣದ ರೇಶ್ಮೆ ಸೀರೆ ಧರಿಸಿದ್ದಾರೆ ಆನಂತ ನೀಲಿ-ಕೆಂಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೀಮ್ ಹಾಗೂ ಕೆಂಪು ಕಾಂಬಿನೇಷನ್‌ನಲ್ಲಿ ಇರುವ ರೇಶ್ಮೆ ಪಂಚೆ ಮತ್ತು ಶೆಲ್ಯೆಯನ್ನು ಪ್ರತ್ಯಕ್ಷ್‌ ಧರಿಸಿದ್ದಾರೆ. ಮದುವೆ ಕಾರ್ಯಕ್ರಮ ಸುಮಾರು ಮೂರು ದಿನಗಳಿಂದ ನಡೆಯುತ್ತಿದೆ.

ಚಂದನಾ ಅನಂತಕೃಷ್ಣ ನಿವಾಸದಲ್ಲಿ ಮೆಹೆಂದಿ ಶಾಸ್ತ್ರಿ ಅದ್ಧೂರಿಯಾಗಿ ನಡೆದಿದೆ. ಅದಾದ ಮೇಲೆ ಮತ್ತೊಂದು ಸ್ಥಳದಲ್ಲಿ ಸಂಗೀತ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

Oplus_131072

ವರ ಪೂಜೆಯನ್ನು ಛತ್ರದಲ್ಲಿ ಮಾಡಲಾಗಿತ್ತು ಆಗ ಚಂದನಾ ಹಳದಿ ಬಣ್ಣದ ಸೀರೆಯನ್ನು ಧರಿಸಿದ್ದರು. ಮದುವೆ ದಿನವೇ ಚಂದನ್ ಪ್ರೀ- ವೆಡ್ಡಿಂಗ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.