ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ, ಪರಿಹಾರ ಆದ್ರೂ ನೀಡಿ: ವಿಕ್ರಂ ಗೌಡ ಸಹೋದರಿ ಸುಗುಣ ಪ್ರತಿಕ್ರಿಯೆ


ಉಡುಪಿ: ಆರು ಜನ ನಕ್ಸಲರ ಶರಣಾಗತಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಎನ್ಕೌಂಟರ್ ಗೆ ಬಲಿಯಾದ ವಿಕ್ರಂ ಗೌಡ ಸಹೋದರಿ ಸುಗುಣ ಅವರು, ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ. ಪರಿಹಾರ ಆದರೂ ನೀಡಿ ಎಂದು ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ‌.

ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೆ ನಮ್ಮ ದಿನ ಸಾಗೋದಿಲ್ಲ. ಸರೆಂಡರ್ ಆಗುವವರಿಗೆ ಕೊಡೊ ಪರಿಹಾರ ನಮಗೆ ಕೊಡಿ ಸಾಕು. ನನ್ನ ಅಣ್ಣನ ಜೀವ ಕೊಡಲು ಸಾಧ್ಯವಿಲ್ಲ. ಎನ್ಕೌಂಟರ್ ಆಗಿದೆ ಅವರ ಜೀವ ಹೋಗಿಯಾಗಿದೆ. ಉಳಿದವರಿಗೆ ಕೊಡೊ ಪರಿಹರ ನಮಗೆ ಕೊಟ್ರೆ ಸಾಕು ನಾವು ಕಷ್ಟದಲ್ಲಿದ್ದೇವೆ ಎಂದು ಹೇಳಿದ್ದಾರೆ.