ಅಕ್ರಮ ಬುಲ್ ಟ್ರೋಲ್ ಮೀನುಗಾರಿಕೆಗೆ ವಿರೋಧ

ಉಡುಪಿ: ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 40ಕ್ಕೂ ಅಧಿಕ ಬುಲ್ ಟ್ರಾಲ್ ಬೋಟ್ ಗಳನ್ನು ಬೈಂದೂರು ಮೀನುಗಾರರು ಅಡ್ಡಗಟ್ಟಿ ವಾಪಸ್ ಕಳುಹಿಸಿದ ಘಟನೆ ಬೈಂದೂರು ವ್ಯಾಪ್ತಿಯ ಗಂಗೊಳ್ಳಿ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಆದೇಶದಂತೆ ಬುಲ್ ಟ್ರೋಲ್ ಮೀನುಗಾರಿಕೆಗೆ ನಿಷೇಧವಿದೆ. ನಿರಂತರವ ಬುಲ್ ಟ್ರೋಲ್ ಮೀನುಗಾರಿಕೆಯಿಂದ ಮೀನಿನ ಸಂತತಿ ನಾಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಬುಲ್ ಟ್ರೋಲ್ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಆದರೂ ಅನಧಿಕೃತವಾಗಿ ಬುಲ್ ಟ್ರೋಲ್ ಮೀನುಗಾರಿಕೆ ಮಾಡುತ್ತಿದ್ದು, ಇದರಿಂದ ಸಣ್ಣಪುಟ್ಟ ಮೀನುಗಾರರಿಗೆ ಸಮಸ್ಯೆ ಆಗುತ್ತಿದೆ.

ಈ ವಿಧಾನದಲ್ಲಿ ಎರಡು ಬೋಟುಗಳಲ್ಲಿ 100 ಮೀಟರ್ ಅಗಲಕ್ಕೆ ಬಲೆಯನ್ನು ಹಾಕಿ ಮೀನು ಹಿಡಿಯಲಾಗುತ್ತದೆ‌. ಟ್ರಾಲ್ ಬೋಟ್ ನವರು ಸುಮಾರು 45 ಪೊಸಿಶನ್ 29 ಲಾಂಗ್ ನಲ್ಲಿ ಬುಲ್ ಟ್ರೋಲ್ ಮಾಡುತ್ತಿರುವುದು ಪತ್ತೆಯಾಗಿದೆ. ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದರು ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಬೈಂದೂರು ವಲಯ ಮತ್ತು ಗಂಗೊಳ್ಳಿ ವಲಯ ನಾಡ ದೋಣಿ ಮೀನುಗಾರರು ಕಾರ್ಯಾಚರಣೆಗೆ ಇಳಿದು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಸುಮಾರು 40ಕ್ಕೂ ಅಧಿಕ ಟ್ರಾಲ್ ಬೋಟ್ ಗಳನ್ನು ವಾಪಸ್ ಕಳುಹಿಸಿದ್ದಾರೆ.