ಅಂತರಾಷ್ಟ್ರೀಯ ಟೆಕೊಂಡೋ ಚಾಂಪಿಯನ್ ಶಿಪ್ ಕಾರ್ಕಳದ ಪ್ರೀತಮ್ ದೇವಾಡಿಗಗೆ ದ್ವಿತೀಯ ಸ್ಥಾನ

ಕಾರ್ಕಳ: ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡೆ ಆಗಿರುವ ಟೆಕೊಂಡೋ ಸ್ಪರ್ಧೆಯಲ್ಲಿ ಗುಂಡ್ಯಡ್ಕ ದ ಪ್ರೀತಮ್ ದೇವಾಡಿಗ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಇವರು ಎಂಪಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು, ಸುರೇಶ್ ದೇವಾಡಿಗ ಇವರ ಬಳಿ ಟೆಕೊಂಡೋ ಅಭ್ಯಾಸ ಮಾಡುತ್ತಿದ್ದಾರೆ. ಇವರು ಗುಂಡ್ಯಡ್ಕ ಪ್ರೇಮನಾಥ್ ದೇವಾಡಿಗ ಮತ್ತು ಪುಷ್ಪ ದೇವಾಡಿಗ ದಂಪತಿಗಳ ಪುತ್ರ.