ಉಡುಪಿ: ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡವೊಂದು ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಹೆದ್ದಾರಿ ಪಕ್ಕದಲ್ಲಿಯೇ ಚಹಾ ಅಂಗಡಿಯ ಬದಿಯಲ್ಲಿ ಇದ್ದ ಮನೆ ಸಂಪೂರ್ಣ ಕೊಚ್ಚಿ ಹೋಗಿದೆ. ಧರೆ ಕುಸಿದ ರಭಸಕ್ಕೆ ಪಕ್ಕದಲ್ಲಿಯೇ ನಿಂತಿದ ಲಾರಿ ಗಂಗಾವಳಿ ನದಿಯಲ್ಲಿ ತೇಲಿ ಬಂದಿದೆ. ಈ ಘಟನೆ ಕಂಡ ಜನರು ಭಯ ಭೀತರಾಗಿದ್ದಾರೆ.ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11), ಅವಾಂತಿಕಾ (6), ಜಗನ್ನಾಥ(55 ) ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ವಾಹನ ಸಂಚಾರವನ್ನು ನಿಷೇಧ ಹಾಕಲಾಗಿದೆ.