ಹೆಬ್ರಿ: ಲಾರಿ ಡಿಕ್ಕಿ; ಬೈಕ್ ಸವಾರರಿಗೆ ಗಾಯ

ಹೆಬ್ರಿ: ಲಾರಿ ಡಿಕ್ಕಿಯಾಗಿ ಬೈಕ್ ಸವಾರರು ಗಾಯಗೊಂಡ ಘಟನೆ ಇಲ್ಲಿನ ಹೊರೊಣಮಕ್ಕಿ ಪಂಜುರ್ಲಿ ದೇವಸ್ಥಾನದ ಬಳಿ ಇರುವ ತಿರುವು ರಸ್ತೆಯ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಹೆಬ್ರಿ ಸಂತೆಕಟ್ಟೆಯಿಂದ ಮದ್ದೂರು ಕಡೆಗೆ ವೇಗವಾಗಿ ಚಲಿಸುತ್ತಿದ್ದ ಲಾರಿಯ ಹಿಂಬದಿಯು ಬೈಕ್ ಗೆ ಡಿಕ್ಕಿ ಹೊಡೆದು, ಚಾಲಕ ಸಾಗರ್ (24) ಕೈ ಮೂಳೆಮುರಿದೆ ಮತ್ತು ಸಹಸವಾರ ಸುಧೀರ್ ಎಂಬವರ ತಲೆ ಹಾಗೂ ಬಲಕೈಗೆ ತೀವ್ರ ಪೆಟ್ಟು ಬಿದ್ದಿದೆ.

ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.