ಹೆಬ್ರಿ: ಎಸ್. ಆರ್ ಕಾಲೇಜಿನಲ್ಲಿ “ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ ಮತ್ತು ಒತ್ತಡ ನಿರ್ವಹಣೆ”ಯ ಕುರಿತು ಚಿಂತನೆ

ಹೆಬ್ರಿ: ಪ್ರತಿದಿನ ಹೊಸ ಹೊಸ ತಂತ್ರಜ್ಞಾನಗಳು ಹುಟ್ಟಿಕೊಳ್ಳುತ್ತವೆ ಇವುಗಳು ಬದುಕಿಗೆ ಪೂರಕವಾಗುವಂತೆ ನಾವು ಹೊಂದಿಕೊಂಡು ಬದುಕಬೇಕು. ಯಾಂತ್ರಿಕ ಜೀವನದಲ್ಲಿ ಬುದ್ಧಿವಂತಿಕೆ, ಪ್ರಶ್ನಿಸುವಿಕೆಯ ಜೊತೆಗೆ ಒತ್ತಡವನ್ನು ನಿಯಂತ್ರಿಸುವುದು ಬಹಳ ಮುಖ್ಯ ಎಂದು ಎಸ್.ಆರ್ ಪದವಿ ಪೂರ್ವ ಕಾಲೇಜು ಮತ್ತು ನಕ್ಸಲ್ ನಿಗ್ರಹ ದಳದ ವತಿಯಿಂದ ನಡೆದ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ ಮತ್ತು ಒತ್ತಡ ನಿರ್ವಹಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಎ.ಹೆಚ್ ಸಾಗರ್ ರವರು ಮಾತನಾಡಿದರು.

ಎಸ್.ಆರ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಹೆಚ್. ನಾಗರಾಜ್ ವಿದ್ಯಾರ್ಥಿಗಳು ದೇಶವನ್ನು ರಕ್ಷಿಸುವ ಅರಕ್ಷಕರು ಹಾಗೂ ಸೈನಿಕರನ್ನು ತಮ್ಮ ಆದರ್ಶ ವ್ಯಕ್ತಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಸಪ್ನ ಎನ್ ಶೆಟ್ಟಿ, ನಕ್ಸಲ್ ನಿಗ್ರಹ ದಳದ ಎಸ್ಪಿ ಶ್ರೀ ಜಿತೇಂದ್ರ ಕುಮಾರ್ ದಯಾಮ, ನಕ್ಸಲ್ ನಿಗ್ರಹ ದಳದ ಡಿವೈಎಸ್ಪಿ ಶ್ರೀ ರಾಘವೇಂದ್ರ , ನಕ್ಸಲ್ ನಿಗ್ರಹ ದಳದ ಸಬ್ ಇನ್ಸ್ಪೆಕ್ಟರ್ ಶ್ರೀ ಸತೀಶ್ ಉಪಸ್ಥಿತರಿದ್ದರು.

ಶ್ರೀ ಹರಿಪ್ರಸಾದ್ ರಸಾಯನಶಾಸ್ತ್ರ ಉಪನ್ಯಾಸಕರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.