ಹೆಬ್ರಿ: ಅಡಿಕೆ ಮರ ಬಿದ್ದು ವ್ಯಕ್ತಿ ಮೃತ್ಯು.

ಹೆಬ್ರಿ: ತಾಲೂಕಿನ ವರಂಗ ಗ್ರಾಮದ ಮುನಿಯಾಲು ಮಾತಿಬೆಟ್ಟು ಎಂಬಲ್ಲಿ ಜೂ.8ರಂದು ಅಡಿಕೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.

ಮೃತ ದುರ್ದೈವಿಯನ್ನು ಶಂಕರ (62) ಎಂದು ಗುರುತಿಸಲಾಗಿದೆ.

ಶಂಕರ ಮಾತಿಬೆಟ್ಟು ಅರುಣ್ ಎಂಬವರ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗದ್ದೆಯ ಬದಿಯಲ್ಲಿದ್ದ ಒಣಗಿದ ಅಡಿಕೆ ಮರ ಆಕಸ್ಮಿಕವಾಗಿ ತುಂಡಾಗಿ ಮೈ ಮೇಲೆ ಬಿದ್ದ ಪರಿಣಾಮ ಮೃತಪಟ್ಟಿರುತ್ತಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.