ಹಿರಿಯಡಕ: ಮಾ.01 ರಿಂದ ಮಾ.03 ರವರೆಗೆ ಅಂಜಾರು ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ.

ಹಿರಿಯಡಕ: ಉಡುಪಿ ಹಿರಿಯಡ್ಕ ಅಂಜಾರು ಬ್ರಹ್ಮಬೈದರ್ಕಳ ಗರಡಿ ಇಲ್ಲಿ ಮಾ.01 ರಿಂದ ಮಾ.03 ರವರೆಗೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಲಿದೆ.

ಕಾರ್ಯಕ್ರಮಗಳ ವಿವರ:
ಮಾರ್ಚ್ 1ರಂದು ರಾತ್ರಿ ಘಂಟೆ 9:30ಕ್ಕೆ ಅಗೆಲ್ ಸೇವೆ, ಮಾರ್ಚ್ 2 ರಂದು ಸಾಯಂಕಾಲ ಘಂಟೆ 7:00ಕ್ಕೆ ತಡ್ಸಲೆ ಹೊರಡುವುದು, ರಾತ್ರಿ ಘಂಟೆ 8-00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರಾತ್ರಿ ಬೈದರ್ಕಳ ನೇಮೋತ್ಸವ, ರಾತ್ರಿ ಘಂಟೆ 12:00ಕ್ಕೆ ಬೈದರ್ಕಳ ಮಹಾಮಾಯಿ ದೇವಿಯ ದರ್ಶನ ಹಾಗೂ ಶಿವರಾಯ ದರ್ಶನ, ರಾತ್ರಿ ಘಂಟೆ 2:30ಕ್ಕೆ ಹುಲಿ ಚಾಮುಂಡಿ ಕೋಲ, ರಾತ್ರಿ ಘಂಟೆ 3.00ಕ್ಕೆ ಧೂಮಾವತಿ ಕೋಲ‌ ಹಾಗೂ ಮಾರ್ಚ್ 3ರಂದು ಪೂರ್ವಾಹ್ನ ಘಂಟೆ 9:30ಕ್ಕೆ ಮಾಯಂದಲೆ ಕೋಲ ನಡೆಯಲಿದೆ.

ಆದರದ ಸ್ವಾಗತ ಬಯಸುವ:

ವಿದ್ಯಾಧರ ಆರ್. ಶೆಟ್ಟಿ ಗೌರವ ಅಧ್ಯಕ್ಷರು

ಅಮರನಾಥ್ ಆರ್. ಶೆಟ್ಟಿ ಅಧ್ಯಕ್ಷರು,

ಸುಧೀರ್ ಹೆಗ್ಡೆ ಕಾರ್ಯದರ್ಶಿ

ಸುಂದರ ಪೂಜಾರಿ ಅರ್ಚಕರು ಪ್ರಕಟಣೆ ತಿಳಿಸಿದೆ.

ವಿ.ಸೂ.: ತಾ.02-03-2025ರಂದು ರಾತ್ರಿ ಘಂಟೆ 8:30ಕ್ಕೆ ಮಹಾಪೂಜೆಯಾಗಿ ಅನ್ನಸಂತರ್ಪಣೆ ಜರಗಲಿರುವುದು.