ಹಿಂದೂಸ್ತಾನಿ ಗಾಯಕ ಪ್ರದೀಪ್ ಕುಕ್ಕುಡೆ ಇವರ “ಮೋರೆಯಾ ಮೋರೆಯಾ” ಗಾನ-ನೃತ್ಯ ವಿಡಿಯೋ ಹಾಡು ಬಿಡುಗಡೆ.

ಮಣಿಪಾಲ: ಹಿಂದೂಸ್ತಾನಿ ಗಾಯಕ ಪ್ರದೀಪ್ ಕುಕ್ಕುಡೆ ಇವರ “ಮೋರೆಯಾ ಮೋರೆಯಾ” ಗಾನ-ನೃತ್ಯ ವಿಡಿಯೋ ಹಾಡು ಶ್ರೀ ನರಸಿಂಹ ದೇವಸ್ಥಾನ ನರಸಿಂಗೆಯಲ್ಲಿ ಅತಿಥಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಈ ವಿಶೇಷ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಖೇಸ್ತರಾದ ರಮೇಶ್ ಸಾಲ್ವಂಕರ್, ಆನಂದ್ ನಾಯಕ್ ನರಸಿಂಗೆ, ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋಒಪರೇಟಿವ್ ಸೊಸೈಟಿಯ ಆಡಳಿತ ನಿರ್ದೇಶಕರಾದ ನಿತ್ಯಾನಂದ್ ನಾಯಕ್ ನರಸಿಂಗೆ ಉಪಸ್ಥಿತರಿದ್ದರು.

https://youtu.be/KiU_Yz8aXHI?si=z_GUpY_QSzSmEZ2B

ಹಾಡನ್ನು ಅನಾವರಣಗೊಳಿಸಿ “ಮೋರೆಯಾ ಮೋರೆಯಾ” ಗಾನ-ನೃತ್ಯ ತಂಡಕ್ಕೆ ಶುಭ ಹಾರೈಸಿದರು.

ಈ ಗಾನ-ನೃತ್ಯಕ್ಕೆ ಪ್ರದೀಪ್ ಕುಕ್ಕುಡೆಯವರ ಗಾಯನ, ವಿದ್ವಾನ್ ಭವಾನಿಶಂಕರ್ ರವರ ನೃತ್ಯ ಸಂಯೋಜನೆ, ಶ್ರೀಮತಿ ನೇತ್ರಾವತಿ ಪ್ರದೀಪ್ ರವರ ಪರಿಕಲ್ಪನೆ, ಅನೀಶ್ ಕೊಂಡಾಡಿಯವರ ಚಿತ್ರೀಕರಣ, ಭ್ರಾಮರಿ ನಾಟ್ಯಾಲಯ ಹಾಗೂ ಸಪ್ತಸ್ವರ ಸಂಗೀತ ಶಾಲೆಯ ವಿದ್ಯಾರ್ಥಿಗಳ ನೃತ್ಯ ಮೆರುಗು ನೀಡಿದೆ.