ಉಡುಪಿ: ಉಡುಪಿ ಜಿಲ್ಲೆಯ ಅತ್ಯಂತ ಪುರಾತನ ನೈಸರ್ಗಿಕ ಬಂದರು ಹಂಗಾರಕಟ್ಟೆಯಲ್ಲಿ ವೈಶಿಷ್ಟ್ಯವೊಂದು ನಡೆದಿದೆ.
ಬಿಳಿ ಬಣ್ಣದ ಅಪಾರ್ಟ್ಮೆಂಟ್ ನಂತೆ ಕಾಣುವ ಬೃಹತ್ ಗಾತ್ರದ ಹಡಗು ಒಂದು ನೀರಿಗೆ ಇಳಿಸುವ ದೃಶ್ಯ ಗಮನ ಸೆಳೆದಿದೆ. ಕ್ಯಾಸಿಯೋ ಆಟಕ್ಕಾಗಿ ಈ ಹಡಗು ಸಿದ್ಧ ಗೊಳಿಸಲಾಗಿದೆ ಎನ್ನಲಾಗಿದ್ದು, ಹಲವಾರು ತಿಂಗಳುಗಳ ಕಾಲದ ಶ್ರಮದ ಬಳಿಕ ನಿರ್ಮಾಣಗೊಳಿಸಲಾಗಿತ್ತು. ಸದ್ಯ ಹಡಗು ಹಂಗಾರಕಟ್ಟೆ ಬಂದರಿಂದ ಹೊರಟಿದ್ದು, ಗೋವಾ ತಲುಪಲಿದೆ.












