ಸಿಎಂ ಸಿದ್ದರಾಮಯ್ಯಗೆ ರೈತರ ಶಾಪ ತಟ್ಟುವ ದಿನ ದೂರವಿಲ್ಲ: ಶ್ರೀಕಾಂತ್ ಕಾಮತ್ ಕಿಡಿ

ಉಡುಪಿ: ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಇದ್ದ ಕೃಷಿ ಸಮ್ಮಾನ್ ಯೋಜನೆಯನ್ನು ಇಂದಿನ ಸಿದ್ದರಾಮಯ್ಯ ಸರಕಾರ ಕಿತ್ತೊಗೆದಿದ್ದು, ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟುವ ದಿನ ದೂರವಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾಮತ್ ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರ ಹಿಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ ಮೊದಲ ಕೆಲಸವೇ ಹಿಂದಿನ ಸರಕಾರದ ಯೋಜನೆಗಳನ್ನು ರದ್ದು ಪಡಿಸಿದ್ದು. ಗೋ ಸಾಕಾಣಿಕೆಗೆ ಸಹಕಾರಿಯಾಗಿ ಗೋಮಾಳಗಳನ್ನು ಗೋಗಳಿಗೆ ಬಿಟ್ಟು ಅನ್ಯ ಚಟುವಟಿಕೆಗೆ ಅವಕಾಶ ಮಾಡಬಾರದು. ಒಂದು ವೇಳೆ ಹುಚ್ಚು ಸಾಹಸಕ್ಕೆ ಕೈ ಹಾಕಿದರೆ ರಾಜ್ಯದ ಜನರು ಬಿಡಲ್ಲ. ಉಪ್ಪು ತಿಂದವ ನೀರು ಕುಡಿಯಲೇ ಬೇಕು. ದುರಹಂಕಾರ ಬಿಟ್ಟು ಒಳ್ಳೆಯ ಮಾರ್ಗದಲ್ಲಿ ಮುನ್ನಡೆಯಿರಿ ಎಂದು ಸಲಹೆ ನೀಡಿದರು.