ಸಾಲ ಮರುಪಾವತಿಸಲು ಸಾಧ್ಯವಾಗದೆ ವ್ಯಕ್ತಿ ನೇಣಿಗೆ ಶರಣು.

ಶಂಕರನಾರಾಯಣ: ಕಮಲಶಿಲೆ ಎಂಬಲ್ಲಿ ಧರ್ಮಸ್ಥಳ ಸಂಘ ಹಾಗೂ ಸೊಸೈಟಿಯಿಂದ ಮಾಡಿರುವ ಸಾಲ ಮರುಪಾವತಿಸಲು ಸಾಧ್ಯವಾಗದೆ ಚಿಂತೆಯಲ್ಲಿ ವ್ಯಕ್ತಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ಕಮಲಶಿಲೆ ಗ್ರಾಮದ ಪ್ರಕಾಶ(30) ಎಂದು ಗುರುತಿಸಲಾಗಿದೆ.

ಇವರು ಮನೆ ಕಟ್ಲಲು ಧರ್ಮಸ್ಥಳ ಸಂಘದಿಂದ ಮೂರು ಲಕ್ಷ ಮತ್ತು ಸೊಸೈಟಿ ಯಿಂದ ಒಂದು ಲಕ್ಷ ಸಾಲ ಮಾಡಿದ್ದು ಇತ್ತೀಚೆಗೆ ಸರಿಯಾಗಿ ಕೆಲಸ ಇಲ್ಲದೆ ಸಾಲದ ಕಂತು ಕಟ್ಟಲು ಸಾಧ್ಯವಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕವಾಗಿ ಮನನೊಂದು ಜೂ.20ರಂದು ರಾತ್ರಿ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ.