ಸಾಂಸ್ಕೃತಿಕ ಹಬ್ಬ “ಆಕೃತಿ – 2024”: ಬಂಟಕಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ

ಉಡುಪಿ: ಕೆನರಾ ಇಂಜಿನಿಯರಿಂಗ್ ಕಾಲೇಜು, ಮಂಗಳೂರು ಇಲ್ಲಿ ಮೇ.9, 10 ಮತ್ತು 11 ರಂದು ನಡೆದ “ಆಕೃತಿ – 2024” ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ಇದರಲ್ಲಿ ಬಂಟಕಲ್‍ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಚೇತನ್ ಕೋಟ್ಯಾನ್ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಸುಜಲ್ ಎಸ್ ಕುಮಾರ್, ವಿನಾಯಕ್ ಯು ಪೈ, ಯಶ್ ಶೆಟ್ಟಿ ಮತ್ತು ತರುಣ್ ಜಿ ಭಟ್ ಇವರು ಫ್ರೀ ಫೈರ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, ಪೂಜಾರಿ ಭೂಷಣ್ ಭಾಸ್ಕರ್ ಮತ್ತು ಮಿಥುಲ್ ಇವರು 24 ಗಂಟೆಗಳ ಹ್ಯಾಕಥಾನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಪೂಜಾರಿ ಭೂಷಣ್ ಭಾಸ್ಕರ್ ಮತ್ತು ಅಮೃತಾ ಇವರು ಪೇಪರ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿರುತ್ತಾರೆ .

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.