ಉಡುಪಿ:’ಪವರ್ ಪರ್ಬ-2025′ ಅದ್ಧೂರಿಯಾಗಿ ಉದ್ಘಾಟನೆ.

ಉಡುಪಿ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆಯ ಆಶ್ರಯದಲ್ಲಿ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಪವರ್ ಪರ್ಬ-2025’ ಶುಕ್ರವಾರ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.

ಪವರ್ ಪರ್ಬಕ್ಕೆ ಚಾಲನೆ ನೀಡಿದ ಪ್ರಗತಿಪರ ರೈತ ಮಹಿಳೆ ಡಾ. ಕವಿತಾ ಮಿಶ್ರಾ ಮಾತನಾಡಿ, ಜೀವನದಲ್ಲಿ ಬರುವ ಸಾವಲುಗಳನ್ನು ಎದುರಿಸಿ ಮುನ್ನಡೆದಾಗ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ. ಮಹಿಳೆಯವರು ಕೂಡ ಸಬಲರು ಎಂಬುದಕ್ಕೆ ಪವರ್ ಸಂಸ್ಥೆ ಸಾಧಿಸಿದ ಸಾಧನೆ ಉತ್ತಮ ಉದಾಹರಣೆ ಎಂದರು.

Oplus_131072

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಮಾತನಾಡಿ, ಪವ‌ರ್ ಪರ್ಬಕ್ಕೆ ಪ್ರೋತ್ಸಾಹಿಸಿದರೆ ಇನ್ನಷ್ಟು ಮಹಿಳೆಯರಿಗೆ ಉತ್ತೇಜನ ದೊರಕುತ್ತದೆ ಎಂದರು.

ಶಾಸಕ ಯಶ್ ಪಾಲ್ ಎ ಸುವರ್ಣ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಎಂಎಸ್‌ಎಂಇ ಜಂಟಿ ನಿರ್ದೇಶಕ ಕೆ.ಸಾಕ್ರಟೀಸ್ ಮಳಿಗೆಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಸ್ಥೆಯ ವತಿಯಿಂದ ಡಾ. ಕವಿತಾ ಮಿಶ್ರಾ ಅವರನ್ನು ಗೌರವಿಸಲಾಯಿತು.

Oplus_131072

ಪ್ರಭಾರ ಎಡಿಸಿ ನಾಗರಾಜ್ ವಿ. ನಾಯಕ್, ಎಐಸಿ ನಿಟ್ಟೆ ಇನ್‌ಕ್ಯುಬೇಶನ್ ಸೆಂಟರ್‌ನ ಸಿಇಒ ಡಾ. ಎ.ಪಿ. ಆಚಾರ್, ಯೂನಿಯನ್ ಬ್ಯಾಂಕ್‌ನ ರೀಜನಲ್ ಹೆಡ್ ನರೇಶ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ರಜನಿ, ಹೆಬ್ಬಾರ್, ಕೋಶಾಧಿಕಾರಿ ಪುಷ್ಪಾ ರಾವ್, ಗಣ್ಯರು, ಸಂಸ್ಥೆಯ ಪದಾಧಿಕಾರಿಗಳು,ಸದಸ್ಯೆಯರು, ಉಪಸ್ಥಿತರಿದ್ದರು.

Oplus_131072
Oplus_131072

ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಿಯಾ ಕಾಮತ್, ಪವರ್ ಪರ್ಬದ ಸಂಯೋಜಕಿ ಸುಗುಣ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್, ಪುಷ್ಪಾ, ಗಣೇಶ್, ತಾರ ತಿಮ್ಮಯ್ಯ ಅತಿಥಿಗಳನ್ನು ಪರಿಚಯಿಸಿದರು. ರೇಷ್ಮಾ ಸಯ್ಯದ್ ಪ್ರಾಯೋಜಕರನ್ನು ಸ್ಮರಿಸಿದರು. ಡಾ. ಪೂಜನ್ ಕಾಮತ್, ಸುಪ್ರಿಯಾ ಕಾಮತ್‌ ನಿರೂಪಿಸಿದರು. ಅರ್ಚನಾ ರಾವ್ ವಂದಿಸಿದರು.