ಉಡುಪಿ: ಪೆರ್ಡೂರು ಗ್ರಾಮದ ಪುತ್ತಿಗೆಯ ಕಲ್ಲಮಠವು ಸುಮಾರು 650 ವರ್ಷಗಳ ಇತಿಹಾಸ ಹೊಂದಿದ್ದು ಜೀರ್ಣೋದ್ಧಾರದವಾಗಬೇಕಿದ್ದು ಆ ಪ್ರಯುಕ್ತ ದಿನಾಂಕ ಮಾ.3 ರಂದು ಪ್ರಥಮ ಬಾರಿಗೆ ಶ್ರೀ ಕೃಷ್ಣ ದೇವರ ಪೂಜಾದೀಕ್ಷೆಯನ್ನು ಸ್ವೀಕರಿಸಲಿರುವ ಭಾವೀ ಪರ್ಯಾಯ ಪೀಠಾಧಿಪತಿಗಳಾದ ಮತ್ತು ಶ್ರೀ ಮಠದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಪಾದಂಗಳರವರು ಶೀರೂರು ಮಠ ಉಡುಪಿ ಇವರ ದಿವ್ಯಹಸ್ತದಿಂದ ಸಂಪ್ರದಾಯದಂತೆ ಸರ್ವರ ಉಪಸ್ಥಿತಿಯಲ್ಲಿ ನಿಧಿ ಕುಂಭ ಸ್ಥಾಪನೆಯೊಂದಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮ ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಭಟ್ ರವರ ಸಭಾಧ್ಯಕ್ಷತೆಯಲ್ಲಿ ಜರುಗಿತು. ಶ್ರೀ ಪಾದಂಗಳರವರು ಶುಭಾಶೀರ್ವಚನಗೈದರು.
ಕಾರ್ಯಕ್ರಮದಲ್ಲಿ ಉದಯ ಕುಮಾರ್ ಸರಳತ್ತಾಯ ದಿವಾನರು,ಶೀರೂರು ಮಠ, ಶ್ರೀಶ ಭಟ್ ಕಡೆಕಾರು,ಗ್ರಾಮ ಪಂಚಾಯತ್ ಅಧ್ಯಕ್ಷೆ ಚೇತನಾ ಶೆಟ್ಟಿ, ಉಪಾಧ್ಯಕ್ಷರು ದೇವು ಪೂಜಾರಿ, ಟ್ರಸ್ಟ್ ಮತ್ತು ಜಿರ್ಣೋದ್ಧಾರ ಸಮಿತಿಯ ಪ್ರಮುಖರಾದ ಸತೀಶ್ ಹೆಗ್ಡೆ ಕುದ್ಮುಂಜೆ, ಸಾಯಿಷಾ ಸುಧಾಕರ ಶೆಟ್ಟಿ ಪೆರ್ಡೂರು, ರವಿ ಹೆಗ್ಡೆ, ಶಾಲಿನಿ ಶೆಟ್ಟಿ ಕದಿಕೆ, ರಾಘವೇಂದ್ರ ಆಚಾರ್ಯ, ಅನಂದ ಕುಲಾಲ್, ರಘ ನಾಯ್ಕ್, ರಾಮ ಕುಲಾಲ್, ಸಿವಿಲ್ ಇಂಜಿನೀಯರ್ ಸತೀಶ್ ಕೋಟ್ಯಾನ್ ಉಡುಪಿ, ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಸಾಲ್ಯಾನ್, ಜಯಶ್ರೀ ಕುಲಾಲ್ ಉಪಸ್ಥಿತರಿದ್ದರು. ಸಭೆಯಲ್ಲಿ ಊರ – ಪರವೂರ ಸದ್ಭಕ್ತರು, ಟ್ರಸ್ಟ್ ಮತ್ತು ಜಿರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು, ವಿವಿಧ ಸಂಘಗಳ ಅಧ್ಯಕ್ಷರುಗಳು ,ಪದಾಧಿಕಾರಿಗಳು & ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.
ಆದಿತ್ಯ ನಾಯ್ಕ ಮತ್ತು ತಂಡದವರು ಪ್ರಾರ್ಥನೆಗೈದರು, ಪಿ. ರಾಧಾಕೃಷ್ಣ ಭಟ್ ಹಿರಿಯಡ್ಕ ಪ್ರಸ್ತಾವನೆಗೈದು ಸ್ವಾಗತಿಸಿದರು. ಪದ್ಮನಾಭ ಭಟ್ ಅಧ್ಯಕ್ಷರು ಜಿರ್ಣೋದ್ಧಾರ ಕಾರ್ಯದ ಬಗ್ಗೆ ತಿಳಿಸಿದರು. ಅತಿಥಿ ಗಣ್ಯರು ಶುಭ ಹಾರೈಸಿದರು. ಶಿಕ್ಷಕರಾದ ರಕ್ಷಿತ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಪರಿಮಳ ಆಶಾ, ಮಂಜುನಾಥ ತೆಂಕಿಲಾಯ, ಹರೀಶ್ ಪೂಜಾರಿ.ಎಸ್, ಸುರೇಶ್ ನಾಯ್ಕ್, ಶ್ರೀನಿವಾಸ ನಾಯ್ಕ್ ,ಸದಾನಂದ ಶೆಟ್ಟಿ , ಮತ್ತಿತ್ತರ ಟ್ರಸ್ಟ್ & ಜೀರ್ಣೋದ್ಧಾರ ಸಮಿತಿಯ ಸಹಕರಿಸಿದರು.












