ಉಡುಪಿ:ಶ್ರೀ ಗಣೇಶೋತ್ಸವ ಸಮಿತಿ ಮೂಡನಿಡಂಬೂರು ಬನ್ನಂಜೆ ; ಸಮಾರೋಪ ಸಮಾರಂಭ , ಸಾಧಕರಿಗೆ ಗೌರವ ಅಭಿನಂದನೆ

ಉಡುಪಿ:ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡನಿಡಂಬೂರು ಬನ್ನಂಜೆ ಉಡುಪಿ , ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಸಭಾ ವೇದಿಕೆಯಲ್ಲಿ ರಜತ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಸುಬ್ರಮಣ್ಯ ಮಠದ ಡಾ ಆನಂದತೀರ್ಥ ಉಪಧ್ಯಾಯ ಧಾರ್ಮಿಕ ಪ್ರವಚನ ನಡೆಸಿಕೊಟ್ಟರು. ಸಾರ್ವಜನಿಕ ಗಣೇಶೋತ್ಸವ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಮಾತನಾಡಿ ಪರಿಸರದ ಜನತೆಯಲ್ಲಿ ಧಾರ್ಮಿಕ ಜಾಗ್ರತೆ ಮೂಡಿಸಲು ಹುಟ್ಟು ಹಾಕಿದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಧಾರ್ಮಿಕ , ಸಾಮಾಜಿಕ , ಸಾಂಸ್ಕೃತಿಕ ನೆಲೆಯಲ್ಲಿ ಹಿಂದುತ್ವದ ಪ್ರತೀಕವಾಗಿ ಬೆಳೆದು ಮಂಗಳವಾರ ರಜತ ಮಹೋತ್ಸವ ಆಚರಣೆಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬನ್ನಂಜೆ ದೇವಳದ ಅಧ್ಯಕ್ಷರಾದ ಹರೀಶ್ ರಾಮ್, ಹೋಟೆಲ್ ಉದ್ಯಮಿ ಪ್ರಭಾಕರ್ ಪೂಜಾರಿ, ಪುತ್ರನ್ ಗ್ಯಾಸನ ದಿನೇಶ್ ಪುತ್ರನ್ , ದೇವಳದ ಪ್ರಧಾನ ಅರ್ಚಕರಾದ ಪಾಡಿಗಾರು ವಾಸುದೇವ ಉಪಾಧ್ಯಾಯ , ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಮಾಧವ ಬನ್ನಂಜೆ , ಯುವ ಉದ್ಯಮಿ ಶೈಲೇಶ್ ಪ್ರಭು , ಪೊಲೀಸ್ ಇಲಾಖೆಯ ಹರೀಶ್ ಕುಂದರ್ , ಮನದೀಪ್ ಮಾರ್ಬಲ್ಸ್ ಅಂಬಲಪಾಡಿ ಮಾಲಕರಾದ ಸನ್ನಿ , ಮರುಸಾಗರ್ ಎಲೆಕ್ಟ್ರಿಕಲ್ಸ್ ಉಡುಪಿ ಕಲ್ಯಾಣ ಸಿಂಗ್ , ಯುವ ಉದ್ಯಮಿ ಶ್ರೀಕಾಂತ್ ಕುಂಡಂತಾಯ್ , ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಎಮ್. ಪ್ರಭಾಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷರಾದ ಯೋಗೀಶ್ ಭಂಡಾರಿ ಬನ್ನಂಜೆ , ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ , ಯೋಗೀಶ್ ಸುವರ್ಣ , ಪ್ರಧಾನ ಕಾರ್ಯದರ್ಶಿ ಮನೋಹರ್ ಶಾಸ್ತ್ರಿ ಕೋಶಾಧಿಕಾರಿ ಯು ಸುಬ್ರಹ್ಮಣ್ಯ ರಾವ್, ಜೊತೆ ಕಾರ್ಯದರ್ಶಿ ಸುನಿಲ್ ಶೆಟ್ಟಿ ಉಪಸ್ಥರಿದ್ದರು. “ವಿಶೇಷ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವ ಅಭಿನಂದನೆ ” 25 ನೇ ವರ್ಷಗಳಿಂದ ಶ್ರೀ ಗಣೇಶೋತ್ಸವದಲ್ಲಿ ವಿಶೇಷ ಸೇವೆ ಸಲ್ಲಿಸಿದ ದೇವಳದ ಪ್ರಧಾನ ಅರ್ಚಕರಾದ ಪಾಡಿಗಾರು ವಾಸುದೇವ ಉಪಾಧ್ಯಾಯ , ಗೌರವ ಅಧ್ಯಕ್ಷರಾದ ಎಮ್ . ಪ್ರಭಾಕರ್ ಶೆಟ್ಟಿ , ಗಣಪತಿ ವಿಗ್ರಹ ರಚನೆಕಾರ ಕ್ಷಿಪ್ರ ಪ್ರಸಾದ ಚಿಟ್ಪಾಡಿ , ವಿಶೇಷ ಹೂವಿನ ಅಲಂಕಾರ ಗೈದ ದಾಮೋದರ್ ಸುವರ್ಣ , ಮುದ್ರಣ ಪತ್ರಿಕೆ ತಯಾರಿಸಿ ಕೊಟ್ಟ ಶಶಿಧರ್ ಶೆಟ್ಟಿ ಅಂಬಲಪಾಡಿ , ಛಾಯಾ ಚಿತ್ರಗಾರ ಮುಕೇಶ್ ಬನ್ನಂಜೆ , ಸ್ವಚ್ಛತೆ ಕಾರ್ಯ ನಿರ್ವಹಣೆ ಶ್ರೀಮತಿ ಗೀತಾ ಶೇರಿಗಾರ್ , ಇವರನ್ನು ಮಾನ್ಯ ಶಾಸಕರಾದ ಯಶ್ ಪಾಲ್ ಸುವರ್ಣ ಶಾಲು ಹೊದಿಸಿ , ಪೇಟ ತೊಡಿಸಿ , ಫಲ ಪುಷ್ಪ ,ಸ್ಮರಣಿಕೆ ನೀಡಿ ಗೌರವಿಸಿದರು.

ಶ್ರೀಮತಿ ಶಶಿರೇಖಾ ಪ್ರಾರ್ಥನೆ,ಶ್ರೀಮತಿ ಶುಭ  ಸುಬ್ರಮಣ್ಯ ರಾವ್ ಸ್ವಾಗತಿಸಿದರು.ಶ್ರೀಮತಿ ಸುಲೋಚನಾ ವಂದನಾರ್ಪಣೆಗೈದರು.                                                                          ಕಲಾತರಂಗ ಕಾಪು  ತಂಡದವರಿಂದ  ತುಳು ಹಾಸ್ಯಮಯ ನಾಟಕ ' ಒರಿಯೆ "  ಕಾರ್ಯಕ್ರಮ ನಡೆಯಿತು.